ಹುಬ್ಬಳ್ಳಿ: ಸುಧೀರ್ಘ ಅವಧಿಯಲ್ಲಿನ ನಿವೃತ್ತರ ಕರ್ತವ್ಯ ತತ್ಪರತೆ ಹಾಗೂ ಸಹೋದ್ಯೋಗಿಗಳೊಂದಿಗೆ ಸೌಹಾರ್ದ ನಡವಳಿಕೆ ಕಿರಿಯ ನೌಕರರಿಗೆ ಅನುಕರಣೀಯ ವಾಗಿದೆ ಎಂದು ವ್ಯಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗಿಯ ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀಮತಿ ಯಮುನಾ ನಾಗರಾಜ್ ನಾಯಕ್ ರವರ ವಯೋ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡು ತ್ತಿದ್ದರು.
1987 ರಲ್ಲಿ ಸಂಸ್ಥೆಯ ಉತ್ತರ ಕನ್ನಡ ವಿಭಾಗದಲ್ಲಿ ಸೇವೆಗೆ ನೇಮಕಗೊಂಡ ಶ್ರೀಮತಿ ಯಮುನಾ ನಾಗರಾಜ ನಾಯಕ್ ರವರು ಕೋವಿಡ್ ಸಂಕಷ್ಟದ ಅವಧಿಯೂ ಸೇರಿದಂತೆ ಕಳೆದ 36 ವರ್ಷಗಳ ಸುಧೀರ್ಘ ಸೇವಾ ವಧಿಯಲ್ಲಿ ಒಂದು ದಿನವೂ ಗೈರು ಹಾಜರಾಗದೆ ಕೆಲಸ ಮಾಡಿದ್ದಾರೆ. ನಿವೃತ್ತಿ ದಿನವೂ ಸಹ ಕೊನೆಯ ಕ್ಷಣದವರೆಗೆ ಕಡತಗಳ ನಿರ್ವಹಣೆ ಕಾರ್ಯ ನಿರ್ವಹಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಯಾವುದೇ ದೂರು ಗಳಿಗೆ ಅವಕಾಶ ನೀಡದ, ಸಹೊದ್ಯೋಗಿಗಳೊಂದಿಗೆ ಅವರ ಸೌಹಾರ್ದ ಒಡನಾಟ ಇಂದಿನ ಪೀಳಿಗೆಯ ನೌಕರರಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಯಮುನಾ ನಾಯಕ ಮಾತನಾಡಿ ತಮ್ಮ ಪತಿ, ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರು, ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸ ಸಾಧ್ಯವಾಯಿತು ಎಂದು ಹೇಳಿದರು. ಅವರ ಪತಿ ನಾಗರಾಜ ನಾಯ್ಕ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಎರಡು ವರ್ಷಗಳ ಹಿಂದೆ ಉಪ ತಹಶಿಲ್ದಾರರಾಗಿ ನಿವೃತ್ತರಾಗಿದ್ದಾರೆ.
ಕುಟುಂಬದವರ ಸಮಕ್ಷಮದಲ್ಲಿ ಅಧಿಕಾರಿಗಳು,ಸಿಬ್ಬಂದಿಗಳು ಹಾಗೂ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ದಂಪತಿಗಳನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು. ವಾಗಿದೆ ಎಂದು ವ್ಯಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗಿಯ ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀಮತಿ ಯಮುನಾ ನಾಗರಾಜ್ ನಾಯಕ್ ರವರ ವಯೋ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
1987 ರಲ್ಲಿ ಸಂಸ್ಥೆಯ ಉತ್ತರ ಕನ್ನಡ ವಿಭಾಗದಲ್ಲಿ ಸೇವೆಗೆ ನೇಮಕಗೊಂಡ ಶ್ರೀಮತಿ ಯಮುನಾ ನಾಗರಾಜ ನಾಯಕ್ ರವರು ಕೋವಿಡ್ ಸಂಕಷ್ಟದ ಅವಧಿಯೂ ಸೇರಿದಂತೆ ಕಳೆದ 36 ವರ್ಷಗಳ ಸುಧೀರ್ಘ ಸೇವಾವಧಿಯಲ್ಲಿ ಒಂದು ದಿನವೂ ಗೈರು ಹಾಜರಾಗದೆ ಕೆಲಸ ಮಾಡಿದ್ದಾರೆ. ನಿವೃತ್ತಿ ದಿನವೂ ಸಹ ಕೊನೆಯ ಕ್ಷಣದವರೆಗೆ ಕಡತಗಳ ನಿರ್ವಹಣೆ ಕಾರ್ಯ ನಿರ್ವಹಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಯಾವುದೇ ದೂರುಗಳಿಗೆ ಅವಕಾಶ ನೀಡದ, ಸಹೊದ್ಯೋಗಿಗಳೊಂದಿಗೆ ಅವರ ಸೌಹಾರ್ದ ಒಡನಾಟ ಇಂದಿನ ಪೀಳಿಗೆಯ ನೌಕರರಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಯಮುನಾ ನಾಯಕ ಮಾತನಾಡಿ ತಮ್ಮ ಪತಿ, ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರು, ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸ ಸಾಧ್ಯವಾಯಿತು ಎಂದು ಹೇಳಿದರು. ಅವರ ಪತಿ ನಾಗರಾಜ ನಾಯ್ಕ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಎರಡು ವರ್ಷಗಳ ಹಿಂದೆ ಉಪ ತಹಶಿಲ್ದಾರರಾಗಿ ನಿವೃತ್ತರಾಗಿದ್ದಾರೆ. ಕುಟುಂಬದವರ ಸಮಕ್ಷಮದಲ್ಲಿ ಅಧಿಕಾರಿಗಳು,ಸಿಬ್ಬಂದಿಗಳು ಹಾಗೂ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ದಂಪತಿಗಳನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು.