ಬೆಂಗಳೂರು: ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಹೆಚ್ ಡಿ ಕುಮಾರಸ್ವಾಮಿ ಕೌಂಟರ್ ಕೊಟ್ಟಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪರ ಬ್ಯಾಟ್ ಬೀಸಿರುವ ಹೆಚ್ಡಿಕೆ, ದಲಿತ ಅಸ್ತ್ರ ಪ್ರಯೋಗ ಮಾಡುವ ಮೂಲಕ ಸಿಎಂ ಸಿದ್ದುಗೆ ದಳಪತಿಗಳು ಕುಟುಕಿದ್ದಾರೆ. ಯೆಸ್,ಇಂಡಿಯಾ ಮೈತ್ರಿಕೂಟದ ನಾಯಕರು ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ಹೇಳಿದ ಬೆನ್ನಲ್ಲೇ,ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.ಇದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು.ಇದೀಗ ಖರ್ಗೆ ಪರವಾಗಿ ನೇರವಾಗಿ ಅಖಾಡಕ್ಕೆ ಇಳಿದಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ,ಸಿಎಂ ಸಿದ್ದರಾಮಯ್ಯ ವಿರುದ್ಧ ದಲಿತ ಹಾಗೂ ಕನ್ನಡಿಗ ಅಸ್ತ್ರ ಪ್ರಯೋಗ ಮಾಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ಡಿಕೆ, ಉತ್ತರ ಭಾರತದ ನಾಯಕರು ಖರ್ಗೆ ಹೆಸ್ರನ್ನ ಪ್ರಧಾನಿ ಅಭ್ಯರ್ಥಿಗೆ ಸೂಚಿಸುತ್ತಾರೆ. ಖರ್ಗೆ ಅವರು ಪ್ರಧಾನಿ ಆಗುತ್ತಾರೋ ಬಿಡುತ್ತಾರೋ ಬೇರೆ ಮಾತು.ಆದ್ರೆ,ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಹೇಳ್ತಿದ್ದಾರೆ. ರಾಜ್ಯದಿಂದ ಖರ್ಗೆಯವರನ್ನ ಸಿದ್ದರಾಮಯ್ಯ ಓಡಿಸಿದ್ರು.ನಾನು ಎನ್ ಡಿ ಎ ಪಾಟ್ನರ್ ಆಗಿರಬಹುದು.ಆದ್ರೆ, ಒಬ್ಬ ಕನ್ನಡಿಗ ಪ್ರಧಾನಿಯಾಗೋದಾದ್ರೆ,ನಾನು ವಿರೋಧ ಮಾಡಲು ನನಗೆ ಸಣ್ಣತನ್ನ ಇಲ್ಲ.ಸಿದ್ದರಾಮಯ್ಯ ಹೇಳಿಕೆಯನ್ನ ರಾಜ್ಯದ ದಲಿತರು ಸೂಕ್ಮವಾಗಿ ಅರ್ಥಮಾಡಿಕೊಳ್ಳಬೇಕೆಂದು ಸಿದ್ದುಗೆ,ಹೆಚ್ಡಿಕೆ ಕೌಂಟರ್ ಕೊಟ್ಟಿದ್ದಾರೆ.
ಇನ್ನು ಕಾಂಗ್ರೆಸ್ ಸರ್ಕಾರದಲ್ಲಿ ಪತ್ರ ಸಮರ ಸಾರಿದ್ದ ಮೂವರು ರೆಬಲ್ ಶಾಸಕರಿಗೆ ವಿಶೇಷವಾದ ಹುದ್ದೆಗಳನ್ನ ಸೃಷ್ಟಿ ಮಾಡಿ ನಿನ್ನೆ ಆದೇಶ ಮಾಡಲಾಗಿತ್ತು.ಬಿ.ಆರ್.ಪಾಟೀಲ್,ಸಿಎಂ ಸಲಹೆಗಾರರು,ರಾಯರೆಡ್ಡಿಗೆ ಸಿಎಂ ಹಣಕಾಸು ಸಲಹೆಗಾರರು,ಆರ್.ವಿ.ದೇಶಪಾಂಡೆಗೆ ಆಡಳಿತ ಸುಧರಾಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.ಈ ಬಗ್ಗೆ ವ್ಯಂಗ್ಯ ಮಾಡಿರುವ ಹೆಚ್ಡಿಕೆ, ಸಿದ್ದರಾಮಯ್ಯಗೆ ಯಾರಾದರೂ ರಾಜಕೀಯ,ಹಣಕಾಸು ಸಲಹೆ ಕೊಡಲು ಸಾಧ್ಯವೇ..?ರಾಯರೆಡ್ಡಿ ವಿಶ್ವದ ಆರ್ಥಿಕ ತಜ್ಞರೇ ಎಂದು ಪ್ರಶ್ನೆ ಮಾಡಿದ್ದಾರೆ.ಇನ್ನು ಹೆಚ್ಡಿಕೆ ಹೇಳಿಕೆಗೆ ಕೌಂಟರ್ ಕೊಟ್ಟಿರುವ ರಾಯರೆಡ್ಡಿ,ಪ್ರತಿಯೊಬ್ಬರಿಗೆ ಅವರದೇ ಆದ ನೈಪುಣ್ಯತೆ ಇರುತ್ತೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಇನ್ನು ಬೆಳಗಾವಿ ಅಧಿವೇಶನದಲ್ಲಿ ಎಲ್ಲರೂ ನನ್ನ ಮೇಲೆ ತುಂಬಾ ಭರವಸೆ ಇಟ್ಟಿಕೊಂಡಿದ್ರು.ಉತ್ತರ ಕರ್ನಾಟಕದ ಭಾಗದ ಬಗ್ಗೆ ಚರ್ಚೆಯಾಗಲಿ ಎಂದು ನಾನು ಸುಮ್ನೆ ಇದ್ದೆ.ಮುಂಬರುವ ಜಂಟಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ದಾಖಲೆ ಸಮೇತ ಹೋರಾಟ ಮಾಡುವುದಾಗಿ ಹೆಚ್ಡಿಕೆ ತಿಳಿಸಿದ್ದರು.ಒಟ್ಟಾರೆ,ಮುಂದಿನ ವರ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೊಸ ಅಸ್ತ್ರಗಳ ಜೊತೆ ಹೋರಾಟ ಮಾಡುವುದಾಗಿ ಹೆಚ್ಡಿಕೆ ಘೋಷಣೆ ಮಾಡಿದ್ದು,ಇದನ್ನ ಯಾವ ರೀತಿ ಸಿದ್ದು ಆಂಡ್ ಟೀಂ ಎದುರಿಸಲಿದೆ ಅನ್ನೋದನ್ನ ಕಾದು ನೋಡಬೇಕಿದೆ.