ಬಿಗ್ ಬಾಸ್ ಮನೆಯಿಂದ ಸಿರಿ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಾರದ ಲೆಕ್ಕಾಚಾರದಲ್ಲಿ ಸಿರಿ (Siri) ಲಿಸ್ಟ್ ನಲ್ಲಿ ಇರಲಿಲ್ಲ. ಹಾಗಾಗಿ ಇದು ಹೇಗೆ ಸಾಧ್ಯ?ವೆಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಸಿರಿ ಈ ವಾರ ಮನೆಯಿಂದ ಆಚೆ ಬಂದಿದ್ದು ನಿಜವೆ ಆಗಿದ್ದರೆ, ಯಾವ ಆಧಾರದ ಮೇಲೆ ಮೈಕಲ್ ಸೇಫ್ ಆದರು ಎನ್ನುವುದನ್ನು ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದಾರೆ.
ಕಳೆದ ವಾರವೇ ಮೈಕಲ್ ಮನೆಯಿಂದ ಆಚೆ ಬರಬೇಕಿತ್ತು. ಕಾರು ಏರಿ ಮನೆಯಿಂದ ಹೊರಟೂ ಬಿಟ್ಟಿದ್ದರು. ಆದರೆ, ಬಿಗ್ ಬಾಸ್ ಅಲ್ಲೊಂದು ಟ್ವಿಸ್ಟ್ ಕೊಟ್ಟಿದ್ದರು. ಪರಿಣಾಮ ಮೈಕಲ್ ಸೇಫ್ ಆದರು. ಆದರೆ, ಈ ಬಾರಿಯಾದರೂ ಮೈಕಲ್ ಮನೆಯಿಂದ ಹೊರ ಬರಲಿದ್ದಾರೆ ಎಂಬ ಲೆಕ್ಕಾಚಾರವಿತ್ತು. ಅದು ಸುಳ್ಳಾದಂತೆ ಕಾಣುತ್ತಿದೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮೈಕಲ್ ಉಳಿದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಅಚ್ಚರಿಗೆ ಕಾರಣವನ್ನು ಇಂದಿನ ಎಪಿಸೋಡ್ ನಲ್ಲಿ ನೋಡಬಹುದಾಗಿದೆ.
ಹಾಗಂತ ಸಿರಿ ಸ್ಟ್ರಾಂಗ್ ಕಂಟೆಸ್ಟೆಂಟ್ ಏನು ಆಗಿರಲಿಲ್ಲ. ಆದರೆ ಕಳಪೆ ಅನ್ನುವಂತಹ ಕೆಲಸವನ್ನೂ ಅವರು ಮಾಡಿರಲಿಲ್ಲ. ಮನೆಯ ಹಿರಿ ಅಕ್ಕನಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದರು. ಟಾಸ್ಕ್ ವಿಚಾರದಲ್ಲಿ ಅವರಿಗೆ ಕಷ್ಟವಾಗುತ್ತಿತ್ತು ನಿಜ, ಆದರೆ, ತಂಡವನ್ನು ಹುರುದುಂಬಿಸುವಲ್ಲಿ, ಕಷ್ಟವಾದಾಗ ಸಾಂತ್ವಾನ ಹೇಳುವುದರಲ್ಲಿ ಸಿರಿ ಯಾವತ್ತಿಗೂ ಮುಂದಿರುತ್ತಿದ್ದರು. ಹಾಗಾಗಿ ಇನ್ನಷ್ಟು ದಿನ ಸಿರಿ ಅವರು ಬಿಗ್ ಬಾಸ್ ಮನೆಯಲ್ಲಿ ಇರ್ತಾರೆ ಎಂದೇ ನಂಬಲಾಗಿತ್ತು.
ಸಿರಿ ಅವರು ಮನೆಯಿಂದ ಹೊರ ಬಂದಿರೋ ವಿಚಾರ, ಅಧಿಕೃತವಾಗಿ ವಾಹಿನಿ ಹೇಳದೇ ಇದ್ದರೂ, ಪ್ರೋಮೋ ರಿಲೀಸ್ ಮಾಡದೇ ಇದ್ದರೂ, ನಂಬಲರ್ಹ ಮೂಲಗಳ ಪ್ರಕಾರ ಸಿರಿ ಅವರೇ ಈ ವಾರ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಆ ಎಪಿಸೋಡ್ ಕೂಡ ಚಿತ್ರೀಕರಣವಾಗಿದೆ. ಇಂದು ಅದರ ಪ್ರಸಾರವಾಗಲಿದೆಯಂತೆ. ಎಂಬತ್ತಕ್ಕೂ ಹೆಚ್ಚು ದಿನಗಳ ಕಾಲ ಸಿರಿ ಬಿಗ್ ಬಾಸ್ ಮನೆಯ ಜರ್ನಿಗೆ ಸಾಕ್ಷಿಯಾಗಿದ್ದಾರೆ. ಈ ವಾರವೂ ಉಳಿಬೇಕಿತ್ತು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು.