ಹಾಸನ: ಬಟ್ಟೆ ಧರಿಸುವ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಕಲಹ ನಡೆದಿದೆ. ಈ ವೇಳೆ ಪತಿಯೇ ಪತ್ನಿಯನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನ (Hassan) ಜಿಲ್ಲೆ ಅರಸೀಕೆರೆ (Arsikere) ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ಜ್ಯೋತಿ (22) ಕೊಲೆಯಾದ ಮಹಿಳೆ, ರಾಂಪುರ ಗ್ರಾಮದ ನಿವಾಸಿ ಜೀವನ್ (25) ಪತ್ನಿ ಕೊಲೆಗೈದ ಆರೋಪಿ.
ಜೀವನ್, ಜ್ಯೋತಿ ಈ ಹಿಂದೆ ಗಾರ್ಮೆಂಟ್ಸ್ನಲ್ಲಿ ಪರಸ್ಪರ ಕೆಲಸ ಮಾಡುತ್ತಿದ್ದಾಗಲೇ ಪ್ರೀತಿಸಿ ಮದುವೆ ಯಾಗಿದ್ದರು (Love Marriage). ಕಳೆದ 6 ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದಾ ಮಾಡ್ರನ್ ಡ್ರೆಸ್ ಧರಿಸುತ್ತಿದ್ದ ಜ್ಯೋತಿ ಬೋಲ್ಡ್ ಆಗಿ ಇರುತ್ತಿದ್ದರು. ಇದೇ ಕಾರಣಕ್ಕೆ ಪತಿ ಜೀವನ್ ಕೋಪಗೊಂಡಿದ್ದ, ಅನುಮಾನ ಪಟ್ಟು ಜಗಳವಾಡಿದ್ದ.
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ.. 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!
ಶನಿವಾರ ಸಂಜೆಯು ಸಹ ಮಾಡ್ರನ್ ಡ್ರೆಸ್ ಹಾಕಿಕೊಂಡು ಜ್ಯೋತಿ ಹೊರಗೆ ಹೊರಟಿದ್ದಳು. ಆಗಲೂ ಜೀವನ್ ವಿರೋಧಿಸಿದ್ದ, ಕೊನೆಗೆ ಬೈಕ್ನಲ್ಲಿ ಡ್ರಾಪ್ ಕೊಡುವುದಾಗಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದ ಜೀವನ್ ಚಾಕುವಿನಿಂದ ಕುತ್ತಿಗೆ ಕೊಯ್ದು ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅರಸೀಕೆರೆ ತಾಲೂಕಿನ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.