ಮೈಸೂರು : ಹಿಂದಿನ ಸರ್ಕಾರದಲ್ಲಿಯೇ ಚಾಮುಂಡಿಬೆಟ್ಟಕ್ಕೆ ರೋಪ್ ವೇ ಬೇಡವೆಂದು ನಿರ್ಣಯಿ ಸಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟ ಒಂದು ಧಾರ್ಮಿಕ ಕ್ಷೇತ್ರ.
ಅಲ್ಲಿಗೆ ರೋಪ್ ವೇ ಬೇಡ ಎಂದು ಶಾಸಕ ಜಿ.ಟಿ. ದೇವೇಗೌಡರ ಸಮ್ಮುಖದಲ್ಲಿ ಸಭೆ ನಡೆಸಿ ಯಾವ ಕಾರಣಕ್ಕೆ ರೋಪ್ ವೇ ಬೇಡ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ರೂಪ್ ವೇ ನಿರ್ಮಿಸುವುದಿಲ್ಲ ಎಂದು ಪ್ರಕಟಿಸಿರುವುದಾಗಿ ತಿಳಿಸಿದರು.
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ.. 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!
ದೇವರ ದರ್ಶನ ಪಡೆಯಲು ಚಾಮುಂಡಿಬೆಟ್ಟಕ್ಕೆ ಹೋಗುತ್ತಾರೆ. ಬೆಟ್ಟದ ಮೇಲಿಂದ ಯಾವುದೇ ವ್ಯೂ ಪಾಯಿಂಟ್ ಇಲ್ಲ. ಚಾಮುಂಡಿಬೆಟ್ಟದ ಬದಲು ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಿಸಬಹುದು. ಚಾಮರಾಜನಗರದ ಯಾವುದಾದರೂ ಗುಡ್ಡಕ್ಕೆ ರೋಪ್ ವೇ ನಿರ್ಮಿಸಿದರೆ ಅಲ್ಲಿನ ಪ್ರವಾಸೋದ್ಯ ಮವಾದರೂ ಅಭಿವೃದ್ಧಿ ಆಗುತ್ತದೆ ಎಂದರು.