ಬೆಂಗಳೂರು : ಹೊಸ ವರ್ಷಕ್ಕೆ ಒಂದು ದಿನ ಮುಂಚೆಯೇ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಹೌದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಪೊಲೀಸ್ ಆಡಳಿತ ವಿಭಾಗಕ್ಕೆ ಚುರುಕು ಮುಟ್ಟಿಸಲು ಮೇಜರ್ ಸರ್ಜರಿ ಮಾಡಿದೆ. ಹೊಸ ವರ್ಷಕ್ಕೆ ಒಂದು ದಿನ ಮುನ್ನವೇ 37 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ.. 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!
ಕೆಲ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ, ಹೊಸ ವರ್ಷಕ್ಕೆ ಗಿಫ್ಟ್ ನೀಡಿದೆ. ಕಮಲ್ ಪಂಥ್ ಅವರನ್ನು ಡಿಜಿಪಿ ನೇಮಕಾತಿ ವಿಭಾಗಕ್ಕೆ ನೇಮಿಸಿದೆ. ಅಲೋಕ್ ಕುಮಾರ್ ಅವರನ್ನು ಕರ್ನಾಟಕ ರೋಡ್ ಸೇಫ್ಟಿ (ರಸ್ತೆ ಸುರಕ್ಷಾ ವಿಭಾಗ) ವಿಭಾಗದ ಸ್ಪೆಷಲ್ ಕಮಿಷನರನ್ನಾಗಿ ಮಾಡಿದೆ. ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ಬಿಎಂಟಿಎಫ್ಗೆ ವರ್ಗಾವಣೆ ಮಾಡಿದೆ.