ಕಲಬುರಗಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನ ಖಾಯಮಾತಿಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಅಂತ ರಾಜ್ಯ ಸರ್ಕಾರಿ ಅತಿಥಿ ಉಪನ್ಯಾಸಕರ ಸಂಘ ತಿಳಿಸಿದೆ..ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಚಂದ್ರಕಾಂತ ಶಿರೋಳಿ,
ಜನೆವರಿ 1ರಂದು ತುಮಕೂರಿನ ಸಿದ್ಧಗಂಗಾ ಮಠದಿಂದ ಪಾದಯಾತ್ರೆ ಶುರುಮಾಡ್ತೇವೆ ಅಂದ್ರು.. ಜನೆವರಿ 4 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ದಲ್ಲಿ ಸಭೆ ಮಾಡ್ತೇವೆ ಅಂತ ಹೇಳಿದ್ರು.ಪಾದಯಾತ್ರೆ ಉದ್ದಕ್ಕೂ 10 ಸಾವಿರಕ್ಕೂ ಹೆಚ್ಚಿನ ಅತಿಥಿ ಉಪನ್ಯಾಸಕರು ಭಾಗಯಾಗಲಿದ್ದು ಸರ್ಕಾರದ ವಿರುದ್ಧ ಅತಿದೊಡ್ಡ ಹೋರಾಟ ಮಾಡ್ತೇವೆ ಅಂತ ಎಚ್ಚರಿಕೆ ಕೊಟ್ರು..