ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ನಾಮಫಲಕ ಕಡ್ಡಾಯ ಗೋಳಿಸಬೇಕು, ಕನ್ನಡ ಹೋರಾಟಗಾರರನ್ನು ಈ ಕೂಡಲೇ ಜೈಲಿನಿಂದ ಬಿಡುಗಡೆ ಗೊಳಿಸಬೇಕೆಂದು ವಾಟಾಳ್ ನಾಗಾರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳಿಂದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರವೇ ನಾರಾಯಣ ಗೌಡ ಸೇರಿದಂತೆ ಇತರೆ ಹೋರಾಟಗಾರರು ಕಾರ್ಯಕರ್ತರನ್ನು ಕೊಡಲೇ ಜೈಲಿನಿಂದ ಬಿಡುಗಡೆ ಮಾಡಬೇಕು ಅಂತ ಹೇಳಿ ಇವತ್ತು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ.. 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!
ಕೂಡಲೇ ನಮ್ಮ ಕನ್ನಡ ಹೋರಾಟಗಾರರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಕರ್ನಾಟಕದಲ್ಲಿ ಕನ್ನಡ ಬೋರ್ಡ್ ಕಡ್ಡಾಯ ಮಾಡಬೇಕು ಇಲ್ಲದಿದ್ದರೆ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಹೋರಾಟ ಮುಂದುವರೆಸುತ್ತವೆ ಅಗತ್ಯ ಬಿದ್ದರೆ ಬಂದ್ ಕೂಡ ಮಾಡುತ್ತವೆ ಅಂತ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಎಚ್ಚರಿಸಿದರು, ಇನ್ನ ಅನ್ಯ ಭಾಷೆಯ ಚಿತ್ರಗಳು ರಾಜ್ಯದಲ್ಲಿ ಬ್ಯಾನ್ ಆಗ್ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನ ಇದೇ ವೇಳೆ ಮಾತನಾಡಿದ ಸಾ ರ ಗೋವಿಂದ ಬಂದಿತ ಕನ್ನಡ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು,
ನಾಮಫಲಕವನ್ನು ಕನ್ನಡ ಕಡ್ಡಾಯ ಗೋಳಿಸಬೇಕು, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಬೇಕು, ಮುಖ್ಯ ಮಂತ್ರಿಗಳ ಮೇಲೆ ನಂಬಿಕೆ ಇದೆ,ಕನ್ನಡಕ್ಕಾಗಿ ನಾವು ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು. ಒಟ್ಟಿನಲ್ಲಿ ಕನ್ನಡಿಗರೆಲ್ಲರೂ ಬನ್ನಿ ,ಕನ್ನಡ ಉಳಿಸಿ,ಕನ್ನಡ ಬೆಳೆಸಿ..ಎಂದು ಕರೆ ನೀಡುತ್ತಿರುವ ಕನ್ನಡ ಒಕ್ಕೂಟಗಳ ಈ ಕರೆಗೆ ಸ್ಪಂದಿಸುವ ಅಗತ್ಯವಿದ್ದು, ಸರ್ಕಾರ ನಾರಾಯಣ ಗೌಡ ಸೇರಿದಂತೆ ಇತರೇ ಕನ್ನಡ ಪರ ಹೋರಾಟಗಾರರನ್ನ ಬಿಡುಗಡೆ ಮಾಡುತ್ತಾ ಅಂತ ಕಾದು ನೋಡಬೇಕಿದೆ.