ದಾವಣಗೆರೆ:- ಕಾಂಗ್ರೆಸ್ ವೈಫಲ್ಯ ಮರೆಮಾಚಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯ ಸರ್ಕಾರದ ನೂನ್ಯತೆಗಳ ಮುಚ್ಚಲು, ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರವನ್ನ ಬುರುಡೇ ಸರ್ಕಾರವೆಂದು ಟೀಕಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರದ ಹಣೆಬರಹಕ್ಕೆ ಜನರಿಗೆ ಗ್ಯಾಸ್ ಕೊಡುವ ಯೋಗ್ಯತೆಯೂ ಇಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಕಾದರೆ ಚಾಲೆಂಜ್ ಮಾಡಲಿ. ಸೂರಿಲ್ಲದವರಿಗೆ ಸೂರು ಅಂತಾ 3 ಕೋಟಿ ಮನೆ ಕಟ್ಟಿದ್ದಾಗಿ ಹೇಳುತ್ತಾರೆ. ಆದರೆ, ಮೋದಿ ಸರ್ಕಾರ ಕಳೆದೊಂದು ದಶಕದಲ್ಲಿ 4 ಕೋಟಿ ಮನೆ ಕೊಟ್ಟಿದೆ. ಇದನ್ನು ಸಹಿಸದ ಸಿಎಂ ಬುರುಡೇ ಸರ್ಕಾರವೆನ್ನುತ್ತಾರೆ ಎಂದರು. ಯುಪಿಎ ಆಳ್ವಿಕೆಯಲ್ಲಿ ಶೇ.12ರಷ್ಟು ವಿದ್ಯುತ್ ಕೊರತೆ ಇತ್ತು. ಈಗ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಬೇರೆ ದೇಶಗಳಿಗೆ ಪೂರೈಸುವಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಮುದ್ರಾ, ಸ್ವನಿಧಿ ಯೋಜನೆ, ಡಿಬಿಟಿ ಕೇಂದ್ರ ಸರ್ಕಾರದ ಸಾಧನೆಗಳಾಗಿವೆ ಹೀಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಹತ್ತಾರು ಉದಾಹರಣೆ ಕೊಡಬಹುದು ಎಂದು ತಿರುಗೇಟು ನೀಡಿದರು.