ರಾಂಚಿ:- ಫೋನ್ನಲ್ಲಿ ಮಾತನಾಡುವಾಗ ಅಳಲು ಶುರು ಮಾಡಿದ 2 ವರ್ಷದ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್ನ ಬೆಂಗಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಜರುಗಿದೆ!
ಈ ಸಂಬಂಧ ಮೃತ ಮಗುವಿನ ತಾತ ರೋಜನ್ ಅಲಿಯಾಸ್ ಜಬ್ಬಾರ್ ಅನ್ಸಾರಿ ನೀಡಿದ ದೂರಿನ ಮೇರೆಗೆ ಕರಣ ದಾಖಲಿಸಲಾಗಿದೆ. ಸೊಸೆ ತನ್ನ ಮೊಮ್ಮಗ ಹಆಸಿಫ್ ಅನ್ಸಾರಿಯನ್ನು ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಮಾವ ಆರೋಪಿಸಿದ್ದಾರೆ. ವಿಚಾರಣೆ ವೇಳೆ ನಿರ್ದಯ ತಾಯಿ ಪೊಲೀಸರ ಮುಂದೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಅಫ್ಸಾನಾಗೆ ಎರಡು ಗಂಡು ಮಕ್ಕಳಿದ್ದು, ಒಬ್ಬನಿಗೆ ನಾಲ್ಕು ವರ್ಷ ಮತ್ತು ಇನ್ನೊಬ್ಬನಿಗೆ ಎರಡು ವರ್ಷ. ಆಕೆ ತಾನೂ ಫೋನ್ನಲ್ಲಿ ಮಾತನಾಡುವ ವೇಳೆ ಗಲಾಟೆ ಮಾಡಿದ ಎಂದು ತನ್ನ 2ನೇ ಮಗು ಆಸಿಫ್ ಅನ್ಸಾರಿಯನ್ನು ಕೊಂದು ತಾಯ್ತನಕ್ಕೆ ಅವಮಾನ ಮಾಡಿದ್ದಾಳೆ.