ಬೆಂಗಳೂರು:- 2024ರ ಜನವರಿ 1ರಿಂದ ಅನ್ವಯವಾಗುವಂತೆ ಮದ್ಯದ ದರ ಏರಿಕೆಯಾಗಲಿದೆ ಎಂಬ ಮಾಹಿತಿ ಬರುತ್ತಿದೆ.
ನೀವು ಹೊಸ ವರ್ಷದಲ್ಲಿ ಮದ್ಯ ಮುಟ್ಟೋದಿಲ್ಲ ಅಂತ ನಿರ್ಣಯ ಮಾಡಿರುವವರ ಸಾಲಿನಲ್ಲಿದ್ದರೆ ಈ ಸುದ್ದಿ ಖುಷಿಕೊಡಬಹುದು, ಇಲ್ಲ ಬದುಕನ್ನು ಎಣ್ಣೆಯೊಂದಿಗೇ ಎಂಜಾಯ್ ಮಾಡಬೇಕು ಅನ್ನುವ ನಿರ್ಧಾರ ನಿಮ್ಮದಾದ್ರೆ ನಿಮಗಿದು ಸ್ವಲ್ಪ ಬೇಸರ ತರಬಹುದು!
ಹಾಗಂತ ಈ ದರ ಏರಿಕೆಯನ್ನು ಸರ್ಕಾರ ಪ್ರಕಟಿಸಿದ್ದಲ್ಲ. ಕಳೆದ ಬಜೆಟ್ನಲ್ಲಿ ಸರ್ಕಾರ ಮದ್ಯದ ಮೇಲಿನ ತೆರಿಗೆಯನ್ನು ಕೆಲವಕ್ಕೆ ಶೇಕಡಾ 10 ಇನ್ನು ಕೆಲವಕ್ಕೆ ಶೇ. 20ರಷ್ಟು ಏರಿಕೆ ಮಾಡಿತ್ತು. ಹಾಗಾಗಿ ಜುಲೈ ಒಂದರಿಂದ ಮದ್ಯದ ದರ ಏರಿಕೆ ಜಾರಿಗೆ ಬಂದಿತ್ತು. ಈ ಬಾರಿ ಮದ್ಯದ ದರ ಏರಿಕೆಗೆ ಮುಂದಾಗಿರುವುದು ಕೆಲವು ಮದ್ಯದ ಕಂಪನಿಗಳು. ಜನವರಿ 1ರಿಂದ ದರ ಏರಿಕೆ ಮಾಡುತ್ತಿದ್ದೇವೆ ಎಂದು ಅವರು ಅಬಕಾರಿ ಇಲಾಖೆಗೆ ಪತ್ರ ಬರೆದಿವೆ.
ಈಗ ಇಷ್ಟು ಮುನ್ಸೂಚನೆ ಸಿಕ್ಕಿರುವುದರಿಂದ ಮದ್ಯ ಪ್ರಿಯರು ಈ ವರ್ಷದ ಮುಕ್ತಾಯ ಆಗುವುದರ ಒಳಗೆ ಒಂದಿಷ್ಟು ಕುಡಿದುಬಿಡಬಹುದು. ಯಾಕೆಂದರೆ ಹೊಸ ವರ್ಷದ ಮೊದಲ ದಿನದಿಂದಲೇ ಈ ಏರಿಕೆ ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ.