ಹುಬ್ಬಳ್ಳಿ; ಕೊಟ್ಟಿ ಜನಪದ ಹಾವಳಿಯ ಮಧ್ಯೆ ಮೂಲ ಜನಪದದ ಅರಿವು ಮಕ್ಕಳಿಗೆ ಇಲ್ಲದಾಗಿದ್ದು ಇದರ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ. ಇವರು ಹುಬ್ಬಳ್ಳಿ ತಾಲೂಕ ಹೆಬಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಶಾಲಾ ಅಂಗಳದಲ್ಲಿ ಜನಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .
ನಮ್ಮ ಹಿರಿಯರು ಕಟ್ಟಿಕೊಟ್ಟು ಹೋದ ಮೂಲ ಪರಂಪರೆಯ ಹಾಡುಗಳು ಮೂಲ ಜನಪದ ಇದರ ಬಗ್ಗೆ ಇಂಥ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅರಿವು ಮೂಡಿಸಬೇಕು ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪುರದಪ್ಪ ಗಾಳಿ ವಹಿಸಿಕೊಂಡಿದ್ದರು.
ಕಲಾವಿದ ಕುಬೇರ ಗೌಡ ಮುರಳಿಯವರು ಜನಪದದ ಮೂಲ ಹಾಡುಗಳಾದ ಹಂತಿ ಗೀಗಿ ಲಾವಣಿ ಸೋಬಾನದಂತ ವಿವಿಧ ಹಾಡುಗಳನ್ನು ಹಾಡುವ ಮೂಲಕ ಮಕ್ಕಳಿಗೆ ತಮ್ಮ ತಂಡದೊಂದಿಗೆ ವಿವರಿಸಿದರು ಜನಪದದ ಚರ್ಮ ವಾದ್ಯಗಳಾದ ಹಲಗೆ . ಕರಡಿ ದಿಮ್ಮು ವಾದ್ಯಗಳನ್ನು ನುಡಿಸುವ ಮೂಲಕ ಈ ವಾದ್ಯಗಳ ಹುಟ್ಟು ಹಾಗೂ ಅವುಗಳ ಮಹತ್ವ ಕುರಿತು ವಾದ್ಯ ನುಡಿಸುವ ಮೂಲಕ ಗದಿಗೆಪ್ಪ ಗೌಡ ನಡುವಿನಮನಿ ಅವರು ಮಕ್ಕಳಿಗೆ ವಿವರಿಸಿದರು ಮುಖ್ಯ ಅತಿಥಿಗಳಾಗಿ ವಿಜಯಲಕ್ಷ್ಮಿ ಬಸರಿಕಟ್ಟಿ ಅಶ್ವಿನಿ ಎಸ್ ಕೊಣ್ಣೂರ ವೆಂಕಣ್ಣ ತಳವಾರ್ ಲಾಡಸಾಬಬ್ ಶೇತ ಸನದಿ ಕಾವೇರಿ ಅಕ್ಕಿ ರಾಜೇ ಸಾಬ್ ನಾಯ್ಕರ್ ಪೀರ್ ಖಾನವರ್ ಆಗಮಿಸಿದ್ದರು
ಪ್ರಾರಂಭದಲ್ಲಿ ಶಾಲಾ ಪ್ರಧಾನ ಗುರುಮಾತೆ ಲತಾ ಗ್ರಾಮ ಪುರೋಹಿತ್ ಅವರು ಸ್ವಾಗತಿಸಿದರು ಶಿಕ್ಷಕರಾದ ಮೆಹಬೂಬಸಾಬ್ ಮುಲ್ಲಾ ನವರ್ ವಂದಿಸಿದರು ಇದೇ ಸಂದರ್ಭದಲ್ಲಿ ಕಲಾವಿದರನ್ನು ಶಾಲೆಯ ವತಿಯಿಂದ ಗೌರವಿಸಿ ಸತ್ಕರಿಸಲಾಯಿತು.