ಬಾಗಲಕೋಟೆ :– ಜಿಲ್ಲೆಯ ನೂತನ ತಾಲೂಕು ಕೇಂದ್ರ ರಬಕವಿ ಬನಹಟ್ಟಿ ನಗರಸಭೆಯ ಪಕ್ಕದಲ್ಲೇ ಇರುವ ವಾಹನ ನಿಲುಗಡೆ ಶೆಡ್ ಇದೀಗ ಇಸ್ಪೀಟ್ ಅಡ್ಡೆಯಾಗಿ ಪರಿವರ್ತನೆಯಾದಂತಾಗಿದೆ
ನಗರವನ್ನ ಸ್ವಚ್ಛಗೊಳಿಸಬೇಕಾದ ನಗರಸಭೆಯ ಪೌರ ಕಾರ್ಮಿಕರು ತಾವೇ ಸ್ವತಃ ಸಾರಾಯಿ ಕುಡಿಯುತ್ತಾ ನಗರಸಭೆಯ ವಾಹನ ನಿಲುಗಡೆ ಶೆಡ್ ನಲ್ಲಿ ರಾಜಾರೋಷವಾಗಿ ಹಾಡಹಗಲೇ ಇಸ್ಪೀಟ್ ಆಡುವದನ್ನ ನೋಡಿದ್ರೆ ಇವರಿಗೆ ಮೇಲಾಧಿಕಾರಿಗಳ ಯಾವುದೇ ಬಯ ಇಲ್ಲವೋ ಅಥವಾ ಅಧಿಕಾರಿಗಳ ಸಹಕಾರವೂ ಇದೆಯೋ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ
ಇನ್ನು ಆರು ಜನರ ಈ ಇಸ್ಪೀಟ್ ತಂಡದಲ್ಲಿ ಪೌರಕಾರ್ಮಿಕರ ದಫೆದಾರ್ ಶ್ರೀಕಾಂತ ದೊಡಮಣಿ ಕಿರಣ್ ಮಡ್ಡಿಮಣಿ ಅನಿಲ್ ಹರಿಜನ ಹನಮಂತ ಬಿಸನಾಳ ಸಚಿನ್ ಮಡ್ಡಿಮಣಿ ಹೀಗೆ ಇವರೆಲ್ಲರೂ ಸೇರಿ ಪ್ರತಿನಿತ್ಯ ಕೆಲಸದ ವೇಳೆಯಲ್ಲಿ ತಮ್ಮ ಈ ಇಸ್ಪೀಟ್ ದಂಡೆಯಲ್ಲಿ ತೊಡಗುತ್ತಾರೆ
ಪೌರ ಕಾರ್ಮಿಕರ ಅಕ್ರಮ ಇಸ್ಪೀಟ್ ದಂದೆಯ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದರು ಕೂಡಾ ಮುಕಪ್ರೇಕ್ಷಕರಂತೆ ಇರುವ ಪೌರಾಯುಕ್ತರು ಇನ್ನುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಇದನ್ನೆಲ್ಲ ನೋಡಿದರೆ ಈ ಇಸ್ಪೀಟ್ ದಂದೆಗೆ ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತರ ಶ್ರೀರಕ್ಷೆ ಇದೆಯಾ ಎಂಬ ಪ್ರಶ್ನೆ ಮೂಡುತ್ತಿದೆ
ಇನ್ನಾದರೂ ನಗರಸಭೆಯ ವಾಹನ ನಿಲುಗಡೆ ಶೆಡ್ ಅನ್ನ ಇಸ್ಪೀಟ್ ಅಡ್ಡೆಯಾಗಿ ಪರಿವರ್ತನೆ ಮಾಡಿದ ಪೌರ ಕಾರ್ಮಿಕರ ವಿರುದ್ಧ ಕ್ರಮವಾಗುತ್ತಾ ಕಾಯ್ದು ನೋಡಬೇಕಿದೆ