ಗದಗ: ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಲಾಯಿತು. ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಾಗಿದ್ದು, ಸಭೆಯಲ್ಲಿ ಬೆಳೆ ವಿಮೆ ವಿಚಾರವಾಗಿ ಚರ್ಚೆ ನಡೆಸಲಾಯಿತು. ಬೆಳೆ ವಿಮೆ ಪಾವತಿಸಿದ ಎಲ್ಲ ಅರ್ಹ ರೈತರಿಗೂ ಬೆಳೆ ವಿಮೆ ಯೋಜನೆ ಪರಿಹಾರ ದೊರಕಿಸಲು ಕ್ರಮಕ್ಕೆ ಸೂಚನೆ ನೀಡಿದರು.
ಇನ್ನೂ ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ ಸಿ ಪಾಟೀಲ್, ಶಾಸಕ ಜಿ ಎಸ್ ಪಾಟೀಲ್, ಚಂದ್ರು ಲಮಾಣಿ, ವಿ. ಪ. ಸದಸ್ಯ ಎಸ್ ವಿ ಸಂಕನೂರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ ಸಿಖಾ, ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಎಸ್ಪಿ ಬಿ ಎಸ್ ನೇಮಗೌಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.