ಚಿಕ್ಕಬಳ್ಳಾಪುರ: ಹಾಡಹಗಲೇ ಪೆಟ್ರೋಲ್ ಬಂಕ್ ಗೆ ನುಗ್ಗಿದ ಬಾರ್ ಕ್ಯಾಷಿಯರ್ ಯುವಕನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಬೆಂಗಳೂರು ಮಾರ್ಗದ ಎಚ್ ಪಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ. ಅಂದಹಾಗೆ ಸರಿಸುಮಾರು 25 ವರ್ಷದ ಹೇಮಂತ್ ಕುಮಾರ್ ಕೊಲೆಯಾದವನಾಗಿದ್ದು, ಬಾರ್ ಕ್ಯಾಷಿಯರ್ ರವಿಚಂದ್ರನ್ ಎಂಬಾತನೇ ಕೊಲೆ ಮಾಡಿರುವಾತ.
ಅಂದಹಾಗೆ ಪೆಟ್ರೋಬಂಕ್ ಹಾಗೂ ಆರ್ ಆರ್ ವಾಣಿ ಬಾರ್ ಅಂಡ್ ರೆಸ್ಟೋರೆಂಟ್ ಎರಡು ಸಹ ಅಕ್ಕ ಪಕ್ಕದಲ್ಲಿದ್ದು 50 ಮೀಟರ್ ಅಂತರದಲ್ಲಿವೆ. ಇನ್ನೂ ಮೂಲತಃ ಬುರಡಗುಂಟೆ ಗ್ರಾಮದ ಹೇಮಂತ್ ಕುಮಾರ್ ಮೊದಲು ಇದೇ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದವನಾಗಿದ್ದು ಕಳೆದ ವರ್ಷ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಆರೋಪಿಯಾದ ನಂತರ ಈತನನ್ನ ಕೆಲಸದಿಂದ ತೆಗೆದು ಹಾಕಲಾಗಿತ್ತಂತೆ. ಆದ್ರೂ ಆಗಾಗ್ಗೆ ಬಂದು ಪೆಟ್ರೋಲ್ ಬಂಕ್ ನ ಕೊಠಡಿಯಲ್ಲಿ ಮಲಗೋದು ಮಾಡ್ತಿದ್ದ.
ಲಾಕ್ ಆಗುತ್ತಾ ರಾಜಧಾನಿ ಬೆಂಗಳೂರು – ಕನ್ನಡ ಸಂಘಟನೆಗಳು ಕೊಟ್ಟ ಎಚ್ಚರಿಕೆ ಏನು!?
ಇಂದು ಸಹ ಆರ್ ಆರ್ ಬಾರ್ ಗೆ ಹೋಗಿ ಮದ್ಯ ಸೇವಿಸಿ ಹಣ ಕೊಡದೆ ಬಂದು ಪೆಟ್ರೋಲ್ ಬಂಕ್ ನ ಕೊಠಡಿಯಲ್ಲಿ ಮಲಗಿದ್ದ. ಈ ವಿಷಯ ತಿಳಿದ ಬಾರ್ ಕ್ಯಾಷಿಯರ್ ಯಾವಾಗ್ಲೂ ಕುಡಿದು ದುಡ್ಡು ಕೊಡದೆ ಹೋಗ್ತೀಯಾ ಅಂತ ಪೆಟ್ರೋಲ್ ಬಂಕ್ ನ ಕೊಠಡಿಯಲ್ಲಿದ್ದ ಹೇಮಂತ್ ಕುಮಾರ್ ಜೊತೆ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಘಟನೆ ನಂತರ ಚಿಂತಾಮಣಿ ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಕೃತ್ಯ ನಡೆಸಿದ ಕೊಲೆ ಆರೋಪಿಗಳಾದ ರವಿಚಂದ್ರನ್, ಹಾಗೂ ಲಕ್ಷ್ಮೀನಾರಾಯಣ ಎಂಬುವವರನ್ನ ಚಿಂತಾಮಣಿ ನಗರಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..ಘಟನಾ ಸ್ಥಳದಲ್ಲಿ ಮೃತನ ತಂದೆ ತಾಯಿಗಳ ಆಕ್ರಂದನ ಮಗಿಲು ಮುಟ್ಟಿತ್ತು..