ಮೊದಲೆಲ್ಲ ಪೋಸ್ಟ್ ಆಫೀಸ್ ಎಂದರೆ ಪತ್ರ ವ್ಯವಹಾರ ಮಾತ್ರ ಇತ್ತು. ಆದರೀಗ, ಅಂಚೆ ಕಚೇರಿಗಳು ಬ್ಯಾಂಕ್ಗಳಾಗಿಯೂ ಮಾರ್ಪಾಡಾಗಿರುವುದರಿಂದ ಪೋಸ್ಟ್ ಆಫೀಸ್ಗಳಿಗೆ ಹೆಚ್ಚಿನ ಜನ ತೆರಳುವ, ವಹಿವಾಟು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಪೋಸ್ಟ್ ಆಫೀಸ್ ಬ್ಯಾಂಕ್ಗಳಲ್ಲಿ (Post Office Schemes) ಉಳಿತಾಯ ಯೋಜನೆಗಳಿಗೆ ಆಕರ್ಷಕ ಬಡ್ಡಿಯೂ (Interest) ಸಿಗುವುದರಿಂದ ಹೆಚ್ಚಿನ ಜನ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ (Saving Schemes) ಮೂಲಕ ಲಾಭ ಗಳಿಸುತ್ತಿದ್ದಾರೆ. ಹಾಗಾದರೆ, ಭಾರತೀಯ ಅಂಚೆ ಇಲಾಖೆ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ.
ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ನೀವು ಪೋಸ್ಟ್ ಆಫೀಸ್ ಜಾರಿಗೊಳಿಸಿರುವ ಈ ಹೊಸ ಹೂಡಿಕೆ ಯೋಜನೆಯ ಲಾಭವನ್ನು ಬಳಸಿಕೊಳ್ಳಬಹುದು. ತಿಂಗಳಿಗೆ ಕೇವಲ 1500 ರೂಪಾಯಿಗಳ ಹೂಡಿಕೆಯಲ್ಲಿ ನೀವು 35 ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದೆ. ಹಾಗಾದ್ರೆ ಈ ಯೋಜನೆಯಿಂದ ಸಿಗುವ ಲಾಭವೇನು ಎಂದು ತಿಳಿಯುವುದಾದ್ರೆ.
ಭಾರತೀಯ ಅಂಚೆ ಹಲವು ರೀತಿಯ ಹೂಡಿಕೆ ಅವಕಾಶಗಳನ್ನು ನೀಡುತ್ತದೆ. ಹೂಡಿಕೆದಾರರು ಕೇವಲ 1500 ರೂಗಳನ್ನು ಠೇವಣಿ ಮಾಡಬಹುದು ಮತ್ತು ರೂ 35 ಲಕ್ಷದವರೆಗೆ ಗಳಿಸಬಹುದು. ಈ ಯೋಜನೆಯನ್ನು ‘ಗ್ರಾಮ ಸುರಕ್ಷಾ ಯೋಜನೆ’ ಎಂದು ಕರೆಯಲಾಗುತ್ತದೆ. ಒಂದೊಮ್ಮೆ ನೀವು 19 ವರ್ಷ ವಯಸ್ಸಿನವರಾಗಿದ್ದರೆ ಹೆಚ್ಚು ಲಾಭವನ್ನು ತರಲಿದೆ.
19 ರಿಂದ 55 ವರ್ಷದ ಒಳಗಿನವರು ಹೂಡಿಕೆದಾರರು ಈ ಯೋಜನೆಯಲ್ಲಿ ಹೂಡಿಕೆ ಮಾಲಡು ಅರ್ಹರಾಗಿರುತ್ತಾರೆ. ಈ ‘ಗ್ರಾಮ ಸುರಕ್ಷಾ ಯೋಜನೆ’ ಅಡಿಯಲ್ಲಿ ನೀವು 19 ವರ್ಷ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ನಿಮ್ಮ ಮಾಸಿಕ ಪ್ರೀಮಿಯಂ 55 ವರ್ಷಗಳಿಗೆ ರೂ 1515, 58 ವರ್ಷಗಳಿಗೆ ರೂ 1463 ಮತ್ತು 60 ವರ್ಷಗಳಿಗೆ ರೂ 1411 ಪಾವತಿ ಮಾಡಬೇಕು.
55 ವರ್ಷಗಳ ನಂತರ ಹೂಡಿಕೆದಾರರು 31.60 ಲಕ್ಷ ರೂಪಾಯಿಗಳ ಮೆಚುರಿಟಿ ಲಾಭವನ್ನು ಪಡೆಯುತ್ತಾರೆ. ಒಬ್ಬ ವ್ಯಕ್ತಿ 58 ವರ್ಷಗಳ ನಂತರ ಹೂಡಿಕೆ ಮಾಡಿದರೆ 33.40 ಲಕ್ಷ ರೂ. ಮತ್ತೊಂದೆಡೆ, ಹೂಡಿಕೆಯ ಅವಧಿಯು 60 ವರ್ಷಗಳಾಗಿದ್ದರೆ, ಯೋಜನೆಯ ಪ್ರಯೋಜನವು ರೂ.34.60 ಲಕ್ಷಗಳಾಗಿರುತ್ತದೆ. ಯೋಜನೆಯ ಕನಿಷ್ಠ ಪ್ರಯೋಜನವು ರೂ 10,000 ರಿಂದ ರೂ 10 ಲಕ್ಷಗಳ ನಡುವೆ ಇರಬಹುದು.
ಒಂದೊಮ್ಮೆ ಪಾಲಿಸಿದಾರನು ಮರಣಹೊಂದಿದರೆ ವಿಮಾ ಮೊತ್ತವನ್ನು ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿಗೆ ವರ್ಗಾಯಿಸಲಾಗುತ್ತದೆ. ಈ ಹೂಡಿಕೆ ಯೋಜನೆಯ ಪ್ರೀಮಿಯಂ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು. ತುರ್ತು ಸಂದರ್ಭದಲ್ಲಿ ಬಳಕೆದಾರರ ಶುಲ್ಕವನ್ನು ಪಾವತಿಸಲು 30 ದಿನಗಳ ಗ್ರೇಸ್ ಅವಧಿಯನ್ನು ಒದಗಿಸಲಾಗಿದೆ.
ಮೂರು ವರ್ಷಗಳ ನಂತರ ಗ್ರಾಹಕರು ವಿಮೆಯನ್ನು ಒಪ್ಪಿಸಲು ಸಿದ್ಧರಿದ್ದರೆ, ಅವರಿಗೆ ಯಾವುದೇ ಪ್ರಯೋಜನವಿಲ್ಲ. ಪೋಸ್ಟ್ ಆಫೀಸ್ಗಳಲ್ಲಿ ಟೈಮ್ ಡೆಪಾಸಿಟ್ ಅಕೌಂಟ್ ತೆರೆದರೂ ಉತ್ತಮ ಲಾಭ ಪಡೆಯಬಹುದಾಗಿದೆ. 2023ರ ಜುಲೈ 1ರಿಂದ ಸೆಪ್ಟೆಂಬರ್ 30ರ ಅವಧಿಗೆ ಇಂಡಿಯಾ ಪೋಸ್ಟ್ ಇಷ್ಟು ಬಡ್ಡಿ ನಿಗದಿ ಮಾಡಿದೆ. ಒಂದು, ಎರಡು, ಮೂರು ಹಾಗೂ ಐದು ವರ್ಷದವರೆಗೆ ಠೇವಣಿ ಮಾಡುವ ಹಣಕ್ಕೆ ಇಷ್ಟು ಬಡ್ಡಿ ಸಿಗಲಿದೆ.