ಬೆಂಗಳೂರು:- ಹೊಸ ವರ್ಷಕ್ಕೆ ರಾಜಧಾನಿ ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ಡಿ.31 ರಂದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಯಂತಹ ಹಾಟ್ಸ್ಪಾಟ್ಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರಯಾಣಿಕರಿಗೆ ಮತ್ತು ಪಾರ್ಟಿಗೆ ಹೋಗುವವರಿಗೆ ಸಹಾಯ ಮಾಡಲು ವಿವರವಾದ ಟ್ರಾಫಿಕ್ ಸಲಹೆಯನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಹೊಸ ವರ್ಷದ ಮುನ್ನಾದಿನ ಕೋರಮಂಗಲದ ಟ್ರಾಫಿಕ್ ಅಪ್ಡೇಟ್ ಪ್ರಕಾರ ವೈಡಿ ಮಠದ ರಸ್ತೆ ಮತ್ತು ಪಕ್ಕದ ಅಡ್ಡರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಪ್ರಮುಖ ಪ್ರದೇಶಗಳಲ್ಲಿ ಪಾರ್ಕಿಂಗ್ ನಿರ್ಬಂಧಗಳು ಇರುತ್ತವೆ. ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು. ಸಂಚಾರ ನಿಯಮಗಳ ಅನುಸರಣೆ ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.
ವೈ.ಡಿ. ಮಠದ ರಸ್ತೆಯಲ್ಲಿ ಸುಖ್ ಸಾಗರ್ ಜಂಕ್ಷನ್ನಿಂದ ಮೈಕೋ ಲೇಔಟ್ ಜಂಕ್ಷನ್ವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಜ್ಯೋತಿ ನಿವಾಸ್ ಕಾಲೇಜು ರಸ್ತೆ, 4ನೇ ಬಿ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 17ನೇ ಎಚ್ ಮುಖ್ಯರಸ್ತೆ (ಮಂಗಳ ಕಲ್ಯಾಣ ಮಂಟಪ ಕಡೆಯಿಂದ), 17ನೇ ಎ ಮುಖ್ಯರಸ್ತೆ (ನೇಚರ್ ಬಾಸ್ಕೆಟ್) ಮತ್ತು 17ನೇ ಬಿ ಮುಖ್ಯರಸ್ತೆ ಸೇರಿದಂತೆ ವೈ.ಡಿ.ಮಠದ ರಸ್ತೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ಅಡ್ಡ ರಸ್ತೆಗಳು. (ಅಮುದಮ್ ಕೆಫೆಯ ಪಕ್ಕ), ಸಂಚಾರಕ್ಕೆ ಮುಚ್ಚಲಾಗುವುದು.
ಇನ್ನು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ರಸ್ತೆ ಮತ್ತು ರೆಸಿಡೆನ್ಸಿ ಕ್ರಾಸ್ ರಸ್ತೆಯ ಸುತ್ತಮುತ್ತಲೂ ಸಂಚಾರ ನಿರ್ಬಂಧಿಸಲಾಗಿದೆ. ಅಷ್ಟೇ ಅಲ್ಲ, ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯ ಮೆಟ್ರೋ ನಿಲ್ದಾಣಗಳನ್ನು ರಾತ್ರಿ ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಡಿ.31 ರಂದು ರಾತ್ರಿ 8 ರಿಂದ ಜ.1 ರ ಬೆಳಳಗ್ಗೆ 1 ಗಂಟೆಯವರೆಗೆ ಪೊಲೀಸ್ ಮತ್ತು ಅಗತ್ಯ ಸೇವೆಗಳ ವಾಹನಗಳನ್ನು ಹೊರತುಪಡಿಸಿ ಯಾವುದೇ ವಾಹನ ಸಂಚಾರವನ್ನು ಅನುಮತಿಸಲಾಗುವುದಿಲ್ಲ.
ವೈ.ಡಿ. ಮಠದ ರಸ್ತೆಯಲ್ಲಿ ಸುಖ್ ಸಾಗರ್ ಜಂಕ್ಷನ್ನಿಂದ ಮೈಕೋ ಲೇಔಟ್ ಜಂಕ್ಷನ್ವರೆಗೆ ವಾಹನ ನಿಲುಗಡೆಗೆ ಅವಕಾಶವಿಲ್ಲ. ಯುಕೊ ಬ್ಯಾಂಕ್ ಜಂಕ್ಷನ್ನಿಂದ ಎನ್ಜಿವಿ ಬ್ಯಾಕ್ ಗೇಟ್ ಜಂಕ್ಷನ್ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ಸ್ಟಾರ್ ಬಜಾರ್ ಕ್ರಾಸ್ (ಸ್ಮಶಾನ ಕ್ರಾಸ್) ರಸ್ತೆಯಿಂದ ಮೈಕೋ ಲೇಔಟ್ ಜಂಕ್ಷನ್ ವರೆಗೆ ಪಾರ್ಕಿಂಗ್ ಇಲ್ಲ.
ಆಡುಗೋಡಿ ಜಂಕ್ಷನ್ನಿಂದ ಎನ್ಜಿವಿ ಮತ್ತು ಸೋನಿ ವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ವಾಟರ್ ಟ್ಯಾಂಕ್ ಜಂಕ್ಷನ್ನಲ್ಲಿ ಎಡ ತಿರುವು ಪಡೆಯಬೇಕು. ಮಡಿವಾಳದಿಂದ ಯುಕೊ ಬ್ಯಾಂಕ್ ಜಂಕ್ಷನ್ ಮೂಲಕ ಎನ್ಜಿವಿ ಕಡೆಗೆ ಸಾಗುವ ವಾಹನಗಳು ಯುಕೊ ಬ್ಯಾಂಕ್ ಜಂಕ್ಷನ್ನಿಂದ ತಪ್ಪಿಸಿ ಮಡಿವಾಳ ಸಂತೆ ರಸ್ತೆ ಮೂಲಕ ಅಯ್ಯಪ್ಪ ಜಂಕ್ಷನ್ನಲ್ಲಿ ಬಲ ತಿರುವು ಪಡೆಯಬೇಕು. ಸಾರ್ವಜನಿಕರು ಖಾಸಗಿ ವಾಹನಗಳ ಬದಲಿಗೆ ಸಾರ್ವಜನಿಕ ಸಾರಿಗೆ ಅಥವಾ ಕ್ಯಾಬ್ಗಳನ್ನು ಬಳಸಲು ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್ ಮತ್ತು ಅಜಾಗರೂಕ ಚಾಲನೆ ವಿರುದ್ಧ ಕಟ್ಟುನಿಟ್ಟಾದ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.