ಬೆಳಗಾವಿ:- ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮದಲ್ಲಿ ಜರುಗಿದೆ.
ಬೈಲಹೊಂಗಲ ನಿವಾಸಿ ಮಂಗಲ ಭರಮನಾಯ್ಕರ್ (50) ಚಾಲಕ ಶ್ರೀಶೈಲ ನಾಗನಗೌಡರ ಮೃತರು.
ರಾಯನಾಯ್ಕ ಭರಮನಾಯ್ಕರ್ (87), ಗಂಗವ್ವ ಭರಮನಾಯ್ಕರ್ (80), ಮಂಜುಳ ನಾಗನಗೌಡರ (30)ಇಂಚಲ ಗ್ರಾಮದ ಮತ್ತೊಂದು ಕಾರಿನ ಚಾಲಕ ಸುಬಾನಿ ವಕ್ಕುಂದ (28) ಗಾಯಾಳುಗಳು.
ಗಾಯಾಳುಗಳನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮನೆ ಗೃಹಪ್ರವೇಶಕ್ಕೆ ಬಟ್ಟೆ ಖರೀದಿಸಿ ಮರಳಿ ಬರುತ್ತಿದ್ದ ಭರಮನಾಯ್ಕರ್ ಕುಟುಂಬ, ಈ ವೇಳೆ ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ಬಟ್ಟೆ ಖರೀದಿಸಿ ಮರಳುವಾಗ ಅವಘಡ ಸಂಭವಿಸಿದೆ.
ಮುರಗೋಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.