ನವದೆಹಲಿ: ರಾಮಮಂದಿರ (Ram Mandir) ಲೋಕಾರ್ಪಣೆ ವಿಚಾರದಲ್ಲಿ ನಿರೀಕ್ಷೆಯಂತೆಯೇ ರಾಜಕೀಯ ಜೋರಾಗಿದೆ. ಅಯೋಧ್ಯೆ (Ayodhya) ಹೆಸರಿನಲ್ಲಿ ಒಂದು ಧರ್ಮಕ್ಕೆ ಮಿತಿಮೀರಿದ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ, ಸೋನಿಯಾ ಗಾಂಧಿ (Sonia Gandhi) ಕುಟುಂಬದ ಆಪ್ತ ಸ್ಯಾಮ್ ಪಿತ್ರೊಡಾ (Sam Pitroda) ಹೇಳಿದ್ದಾರೆ.
ಪ್ರಧಾನಿ ಮೋದಿ ಬರೀ ಆಲಯಕ್ಕೆ ಪೂರ್ಣಪ್ರಮಾಣದಲ್ಲಿ ಸಮಯ ಕೊಟ್ಟಿದ್ದಾರೆ. ರಾಮಮಂದಿರದ ಸುತ್ತವೇ ದೇಶ ರಾಜಕೀಯ ಪ್ರದಕ್ಷಿಣೆ ಹಾಕಲಾರಂಭಿಸಿದೆ. ಪ್ರತಿಯೊಬ್ಬರು ಆಲಯದ ಬಗ್ಗೆ, ರಾಮನ ಬಗ್ಗೆ ಮಾತನಾಡುತ್ತಿದ್ದಾರೆ. ಇದನ್ನು ನೋಡಿ ನನಗೆ ನೋವಾಗುತ್ತಿದ್ದು, ಹೀಗಾದರೆ ಆಧುನಿಕ ಭಾರತದ ನಿರ್ಮಾಣ ಹೇಗೆ ಸಾಧ್ಯ ಪಿತ್ರೋಡಾ ಪ್ರಶ್ನಿಸಿದ್ದಾರೆ.
ಧರ್ಮ ಎನ್ನುವುದು ವೈಯಕ್ತಿಕ ವಿಚಾರ. ಆದರೆ ಇದನ್ನು ರಾಷ್ಟ್ರೀಯ ವಿಚಾರವಾಗಿಸಿ ಗೊಂದಲ ಮೂಡಿಸುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್, ರಾಮಮಂದಿರ ವಿಚಾರದಲ್ಲಿ ಧರ್ಮ ರಾಜಕೀಯ ನಡೆಯುತ್ತಿದೆ. ರಾಜಕೀಯಕ್ಕಾಗಿ ಧರ್ಮದ ದುರ್ಬಳಕೆ ಸಲ್ಲದು ಎಂದಿದ್ದಾರೆ.