ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ತವರು ರಾಜ್ಯ ಗುಜರಾತ್ನಲ್ಲಿ (Gujarat) ಟೆಸ್ಲಾ (Tesla) ಕಂಪನಿ ತನ್ನ ಫ್ಯಾಕ್ಟರಿ ತೆರೆಯುವ ಸಾಧ್ಯತೆಯಿದೆ. ಟೆಸ್ಲಾ ಕಂಪನಿ ಭಾರತದಲ್ಲಿ ಘಟಕ ತೆರೆಯಲಿದೆ ಎಂಬ ಸುದ್ದಿ ಕೆಲ ವರ್ಷಗಳಿಂದ ಪ್ರಕಟವಾಗುತ್ತಲೇ ಇದೆ. ಆದರೆ ಇಲ್ಲಿಯವರೆಗೆ ಎಲ್ಲಿ ಘಟಕ ತೆರೆಯಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.
ಆದರೆ ಈಗ ಗುಜರಾತ್ನಲ್ಲಿ ಫ್ಯಾಕ್ಟರಿ ತೆರೆಯಲಿದೆ ಎಂದು ವರದಿಯಾಗಿದೆ. ಜನವರಿಯಲ್ಲಿ ನಡೆಯಲಿರುವ ವೈಬ್ರೆಂಟ್ ಗುಜರಾತ್ (Vibrant Gujarat) ಹೂಡಿಕೆ ಸಮಾವೇಶದಲ್ಲಿ ಈ ಬಗ್ಗೆ ಅಂತಿಮ ಘೋಷಣೆ ಯಾಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕಳೆದ ಕೆಲ ವರ್ಷಗಳಿಂದ ಅಟೋಮೊಬೈಲ್ ಕ್ಷೇತ್ರಕ್ಕೆ ಗುಜರಾತ್ ಉದ್ಯಮ ಸ್ನೇಹಿ ರಾಜ್ಯವಾಗಿರುವ ಹಿನ್ನೆಲೆಯಲ್ಲಿ ಟೆಸ್ಲಾ ಇಲ್ಲೇ ತನ್ನ ಘಟಕ ತೆರೆಯಲು ಮುಂದಾಗಿದೆ ಎನ್ನಲಾಗುತ್ತಿದೆ. ಸಾನಂದ್, ಬೆಚರಾಜಿ ಅಥವಾ ಧೋಲೇರಾ ಪೈಕಿ ಒಂದು ಜಾಗದಲ್ಲಿ ಘಟಕ ನಿರ್ಮಾಣವಾಗಲಿದೆ. ಈಗಾಗಲೇ ಗುಜರಾತ್ನಲ್ಲಿ ಮಾರುತಿ ಸುಜುಕಿ, ಸಿಇಎಟಿ ಟಯರ್, ಫೋರ್ಡ್, ಹೋಂಡಾ, ಎಂಜಿ ಮೋಟಾರ್, ಜೆಸಿಬಿ ಕಂಪನಿಗಳು ಉತ್ಪಾದನಾ ಘಟಕವನ್ನು ತೆರೆದಿವೆ.