ಹುಬ್ಬಳ್ಳಿ: ಆತ ದೇಶದ ಪ್ರಖ್ಯಾತ ಮುಫ್ತಿ( ಮೌಲ್ವಿ) ದೇಶ ವಿದೇಶಗಳಲ್ಲಿ ಆತ ಭಾಷಣ ಮಾಡ್ತಿದ್ದ.ಇದೀಗ ಆ ಮುಫ್ತಿ ( ಮೌಲ್ವಿಯ) ಬಂಧನವಾಗಿದೆ..ಅದು ಯುವತಿಯೊಬ್ಬರ ಮೇಲೆ ಅತ್ಯಾಚಾರ ಮಾಡಿರೋ ಕೇಸ್ ಗೆ ಸಂಭಂದಿಸಿದಂತೆ.ಮದಾರಾಸಾದಲ್ಲಿ ಶಿಕ್ಷಕಿಯಾದ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ ಮೌಲ್ವಿಯನ್ನ ಬಂಧಿಸಲಾಗಿದೆ.ಹುಬ್ಬಳ್ಳಿ ಪೊಲೀಸರು ಮಹಾರಾಷ್ಟ್ರದಲ್ಲಿ ಆತನನ್ನ ಬಂಧಿಸಿದ್ದಾರೆ.ಏನಿದು ಮೌಲ್ವಿಯ ಬಂಧನ,ಹುಬ್ಬಳ್ಳಿಗೆ ಸಂಭಂದ ಏನೂ ಅಂತೀರಾ ಈ ಸ್ಟೋರಿ ನೋಡಿ..
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೂಲೀಸರು,ಮಧ್ಯಪ್ರದೇಶದಲ್ಲಿ ಅಡಗಿ ಕುಳಿತಿದ್ದ ದೇಶದ ಖ್ಯಾತ ಮುಫ್ತಿಯೊಬ್ಬನನ್ನು ಬಂಧಿಸಿದ್ದಾರೆ.ಗುಲಾಮ ಜಿಲಾನಿ ಅಜಹರಿ ಎಂಬ ಮುಫ್ತಿಯನ್ನು ಖಂಡ್ವಾ ಎಂಬಲ್ಲಿ ಬಂಧಿಸಿ, ಹುಬ್ಬಳ್ಳಿಗೆ ಕರೆತರುತ್ತಿದ್ದಾರೆ.ಎಸ್ ಹುಬ್ಬಳ್ಳಿ ಪೊಲೀಸರಿಂದ ಬಂಧಿತನಾಗಿರುವ ಮುಫ್ತಿ ಗುಲಾಮ ಜಿಲಾನಿ ಅಜಹರಿ, ಆತನ ಮದರಸಾದಲ್ಲಿ ಶಿಕ್ಷಕಿಯಾಗಿದ್ದ ಹುಬ್ಬಳ್ಳಿ ಮೂಲದ ಯುವತಿಗೆ ಮತ್ತು ಬರುವ ಔಷಧಿ ಕೊಟ್ಟು ಬಲಾತ್ಕಾರ ಮಾಡಿದ ಆರೋಪ ಕೇಳಿ ಬಂದಿದೆ.
ಮದುವೆ ಮಾಡಿಕೊಳ್ಳುವದಾಗಿ ಹೇಳಿ ಎರಡು ವರ್ಷದ ಅವಧಿಯಲ್ಲಿ ಮೇಲಿಂದ ಮೇಲೆ ಬಲಾತ್ಕಾರ ಮಾಡಿದ್ದಾನೆಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಎರಡು ವರ್ಷದ ಅವಧಿಯಲ್ಲಿ ಗುಲಾಮ ಜಿಲಾನಿ ಅಜಹರಿ, ಒಟ್ಟು ನಾಲ್ಕು ಬಾರಿ ಆಕೆಯ ಗರ್ಭಪಾತ ಮಾಡಿಸಿದ್ದಾನೆ ಎನ್ನಲಾಗಿದೆ.ಆಕೆ ಮತ್ತೆ ಐದನೇ ಬಾರಿಗೆ ಗರ್ಭಿಣಿಯಾದ ಬಳಿಕ ಆಕೆಯನ್ನು ತನ್ನ ತವರು ಮನೆ ಹುಬ್ಬಳ್ಳಿಯಲ್ಲಿ ಬಿಟ್ಟು, ನನ್ನ ನಿನ್ನ ನಡುವೆ ಇನ್ಮೇಲೆ ಯಾವದೇ ಸಂಬಂಧ ಉಳಿದಿಲ್ಲ. ಈ ವಿಷಯ ಬಹಿರಂಗ ಮಾಡಿದರೆ ನಿನ್ನನ್ನು ಮತ್ತು ನಿನ್ನ ಕುಟುಂಬ ಸಮೇತ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾನೆಂದು ಯುವತಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಹುಬ್ಬಳ್ಳಿಯ 23 ವರ್ಷದ ಕೋರ್ಸ್ ಮುಗಿಸಿರುವ ಯುವತಿ, ಮಹಾರಾಷ್ಟ್ರದ ಖಂಡವಾದಲ್ಲಿರುವ ಈತನ ಮದರಸಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ಮೊದಲೇಹುಬ್ಬಳ್ಳಿಯಲ್ಲಿರುವ ಯುವತಿಯ ತಂದೆಯ ಜೊತೆ ಪರಿಚಯನಾಗಿದ್ದ ಗುಲಾಮ ಜಿಲಾನಿ ಅಜಹರಿ, ನಿಮ್ಮ ಮಗಳಿಗೆ ನಮ್ಮಲ್ಲಿ ಕೆಲಸ ಇದೆ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಯುವತಿಯ ಖಂಡವಾ ಪಟ್ಟಣಕ್ಕೆ ಹೋಗಿದ್ದಳು. ಯುವತಿಯನ್ನು ಪುಸಲಾಯಿಸಿದ ಮುಫ್ತಿ ಗುಲಾಮ ಜಿಲಾನಿ ಅಜಹರಿ, ನನಗೆ ಮೊದಲ ಹೆಂಡತಿಯಿಂದ ವಿಚ್ಚೆದನವಾಗಿದೆ.
ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಲೇ ನಿರಂತರವಾಗಿ ಬಲತ್ಕಾರ ಮಾಡುತ್ತಾ ಬಂದ ಎನ್ನಲಾಗಿದೆ.ಯಾವಾಗ ಮದುವೆಯಾಗದೆ ಮೌಲ್ವಿ ಕೈ ಎತ್ತಿದನೋ ನೊಂದ ಯುವತಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 18.12.23 ರಂದು ಕೇಸ್ ದಾಖಲಿಸಿದ್ದಾಳೆ.ಒಟ್ಟು ಮುಫ್ತಿ (ಮೌಲ್ವಿ)ಸೇರಿ ಎಂಟು ಜನರ ವಿರುದ್ದ ಕೇಸ್ ದಾಖಲಾಗಿದೆ. ಗುಲಾಮ್ ಜಿಲಾನಿ ಅಜಹರಿ,ಆಸೀಪ್,ಶಕೀಲ್,ವೈದ್ಯ ಸೇರಿ ಒಟ್ಟು ಎಂಟು ಜನರ ಮೇಲೆ ಕೇಸ್ ದಾಖಲಾಗಿದೆ.ಇದೀಗ ಹುಬ್ಬಳ್ಳಿ ಪೊಲೀಸರು ಮಹಾರಾಷ್ಟ್ರದಲ್ಲಿ ಮುಫ್ತಿ ( ಮೌಲ್ವಿಯ ಬಂಧನವಾಗಿದೆ) ಸಧ್ಯ ಆಕೆಯ ದೂರನ್ನು ಧಾಖಲಿಸಿಕೊಂಡ ಹಳೇ ಹುಬ್ಬಳ್ಳಿ ಪೊಲೀಸರು, ಅತ್ಯಾಚಾರದ ಆರೋಪಿ ಮುಫ್ತಿ ಗುಲಾಮ ಜಿಲಾನಿ ಅಜಹರಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.