ಬೆಂಗಳೂರು: ವಿದ್ಯುತ್ ತಂತಿ ತಗುಲಿ 10 ವರ್ಷದ ಬಾಲಕಿ ದಾರುಣ ಸಾವು ವಿದ್ಯುತ್ ತಂತಿ (Electricity Wire) ತಗುಲಿ 10 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಧ್ಯರಾತ್ರಿಯೇ ರೊಚ್ಚಿಗೆದ್ದ ಅಪಾರ್ಟ್ಮೆಂಟ್ ನಿವಾಸಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಅಪಾರ್ಟ್ಮೆಂಟ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿ 100ಕ್ಕೂ ಹೆಚ್ಚು ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯುತ್ ಪೂರೈಕೆ, ವಿದ್ಯುತ್ ಕಂಬಗಳ ನಿರ್ವಹಣೆ ನೋಡಿಕೊಳ್ತಿದ್ದ ಪಿಪಿಎಂಎಸ್ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿರುವುದಾಗಿ ಆರೋಪಿಸಿದ್ದಾರೆ.
ನನ್ನ ಮಗಳು ಪ್ರತಿ ದಿನ ಪಾರ್ಕನಲ್ಲಿ ಆಟ ಆಡಲು ಹೋಗ್ತಾ ಇದ್ದಳು ಅಲ್ಲಿ ಕರೆಂಟ್ ಶಾಕ್ ಹೊಡೆದು ಸ್ವಿಮ್ಮಿಂಗ್ ಪೂಲ್ ಬಿದ್ದಿದ್ದಾಳೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಕರೆಂಟ್ ಶಾಕ್ ಹೊಡೆದಿದೆ ಕೂಡಲೇ ವಿದ್ಯುತ್ ಸಂಪರ್ಕದ ಸ್ವಿಚ್ ಅಪ್ಮಾಡಿ ಮರದ ಚೇರ್ ಬಳಸಿ ಮಗುವನ್ನ ಮೇಲೆ ಎತ್ತಿದ್ದೇವೆ ಆಸ್ಪತ್ರೆಗೆ ಹೋಗುವುದರಲ್ಲಿ ಮಗಳು ಸಾವನ್ನಪ್ಪಿದ್ದಳು ಈ ರೀತಿ ಇದೆ ಮೊದಲಲ್ಲ ಆಗುತ್ತಿರುವುದು ನನ್ನ ಮಗಳ ಸಾವಿಗೆ ನ್ಯಾಯಬೇಕು
ಯು ಡಿ ಆರ್ ನಲ್ಲಿ ಎಲೆಕ್ಟ್ರಿಕ್ ಶಾಕ್ ಬಗ್ಗೆ ಉಲ್ಲೇಖ ಮಾಡದ ವಿಚಾರ ನಾನು ಕಂಪ್ಲೆಂಟ್ ನಲ್ಲಿ ಮೆನ್ಶನ್ ಮಾಡಿ ಕೊಟ್ಟಿದ್ದೆವೆ ಆದರೆ ಯಾಕೆ ಪೊಲೀಸರು ಮೆನ್ಶನ್ ಮಾಡಿಲ್ಲ ಗೊತ್ತಿಲ್ಲ ಅವರಿಗೆ ಇನ್ನೂ ಪೂರಕವಾದ ದಾಖಲೆ ಬೇಕಾದ್ರು ನೀಡುತ್ತೆವೆ ಎಂದು ಮೃತ ಬಾಲಕಿ ತಂದೆ ರಾಜೇಶ್ ಹೇಳಿಕೆ