ಪಾಕಿಸ್ತಾನ: 26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ನನ್ನು ಹಸ್ತಾಂತರ ಮಾಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಭಾರತ ಸರ್ಕಾರ ಮನವಿ ಮಾಡಿದೆ ಎನ್ನಲಾಗಿದೆ. ಹಫೀಜ್ ಸಯೀದ್ನನ್ನು ಭಾರತಕ್ಕೆ ಕರೆ ತಂದು ಈ ನೆಲದ ಕಾನೂನಿನ ಅನ್ವಯ ಆತನಿಗೆ ಶಿಕ್ಷೆ ವಿಧಿಸಲು ಭಾರತ ಬಯಸಿದೆ. ಈ ಸಂಬಂಧ ಪಾಕಿಸ್ತಾನಕ್ಕೆ ಹಫೀಜ್ ಸಯೀದ್ ಹಸ್ತಾಂತರ ಮಾಡುವಂತೆ ಭಾರತ ಮನವಿ ಸಲ್ಲಿಸಿದೆ ಎನ್ನಲಾಗಿದೆ.
ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಾವು ಭಾರತ ಸರ್ಕಾರದಿಂದ ಮನವಿ ಪತ್ರ ಸ್ವೀಕರಿಸಿರುವುದಾಗಿ ತಿಳಿಸಿದೆ. ಹಫೀಜ್ ಸಯೀದ್ನನ್ನು ಭಾರತಕ್ಕೆ ಗಡಿಪಾರು ಮಾಡಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಭಾರತ ಮನವಿ ಮಾಡಿದೆ ಎನ್ನಲಾಗಿದೆ. ಈ ಸಂಬಂಧ ಪಾಕಿಸ್ತಾನದ ಹಲವು ಸ್ಥಳೀಯ ಮಾಧ್ಯಮಗಳು ಪಾಕಿಸ್ತಾನದ ವಿದೇಶಾಂಗ ಇಲಾಖೆ ಮೂಲಗಳ ಮಾಹಿತಿ ಎಂದು ವರದಿ ಪ್ರಕಟ ಮಾಡುತ್ತಿವೆ.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಆದರೆ, ಈ ಕುರಿತಾಗಿ ಪಾಕಿಸ್ತಾನ ಸರ್ಕಾರ, ಪಾಕಿಸ್ತಾನದ ವಿದೇಶಾಂಗ ಇಲಾಖೆ ಹಾಗೂ ಭಾರತ ಸರ್ಕಾರ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಜೊತೆಯಲ್ಲೇ ಈ ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆಯೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಇನ್ನು ಪಾಕಿಸ್ತಾನದ ವಿದೇಶಾಂಗ ಇಲಾಖೆ ತನಗೆ ಆ ರೀತಿಯ ಮನವಿ ಭಾರತದಿಂದ ಬಂದಿದೆಯೋ? ಇಲ್ಲವೋ? ಅನ್ನೋದನ್ನೂ ಖಚಿತಪಡಿಸಿಲ್ಲ.
ಹಫೀಜ್ ಸಯೀದ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದು, ಈತನ ತಲೆಗೆ ಭಾರತ 10 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಿದೆ. 2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಹಫೀಜ್ ಸಯೀದ್ ಮಾಸ್ಟರ್ ಮೈಂಡ್ ಎಂದು ತನಿಖೆ ವೇಳೆ ತಿಳಿದು ಬಂದಿತ್ತು. ಹಫೀಜ್ ಸಯೀದ್ನನ್ನು ಭಾರತಕ್ಕೆ ಗಡಿ ಪಾರು ಮಾಡಬೇಕು, ಭಾರತದ ವಶಕ್ಕೆ ಒಪ್ಪಿಸಬೇಕು ಎಂದು ಭಾರತ ಸರ್ಕಾರ ಆಗ್ರಹಿಸುತ್ತಿದೆ ಎನ್ನಲಾಗಿದ್ದು, ಮುಂಬೈ ದಾಳಿ ಕುರಿತಾಗಿ ಭಾರತದ ನ್ಯಾಯಾಲಯಗಳಲ್ಲಿ ಹಫೀಜ್ ಸಯೀದ್ ವಿಚಾರಣೆ ಎದುರಿಸಲಿ ಎಂದು ಭಾರತ ಮನವಿ ಮಾಡಿದೆ ಎನ್ನಲಾಗಿದೆ.