ಬೆಂಗಳೂರು, ಡಿ, 28; ಬೆಳಗಾವಿ ಮೂಲದ ದಕ್ಷಿಣ ಭಾರತದ ಪ್ರಮುಖ ಸಹಕಾರಿ ಸಂಸ್ಥೆ ಬೀರೇಶ್ವರ ಕೋ ಅಪರೇಟಿವ್ ಬ್ಯಾಂಕ್ (ಮಲ್ಟಿ ಸ್ಟೇಟ್) ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಇಂದು ಉತ್ತರಹಳ್ಳಿಯ ಕೆಂಗೇರಿ ಮುಖ್ಯ ರಸ್ತೆಯ ಪೂರ್ಣ ಪ್ರಜ್ಞ ನಗರದಲ್ಲಿ 197 ನೇ ನೂತನ ಶಾಖೆ ಹಾಗೂ ಬನಶಂಕರಿ ಮೂರನೇ ಹಂತದಲ್ಲಿ 196 ನೇ ಶಾಖೆಗಳಿಗೆ ಚಾಲನೆ ನೀಡಲಾಯಿತು. ಬೀರೇಶ್ವರ ಕೋ ಅಪರೇಟಿವ್ ಬ್ಯಾಂಕ್ (ಮಲ್ಟಿ ಸ್ಟೇಟ್) ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಬ್ಯಾಂಕ್ ತನ್ನ ಜಾಲವನ್ನು ಹೊಂದಿದೆ.
ಬ್ಯಾಂಕ್ ಒಟ್ಟು 3.54 ಲಕ್ಷ ಸದಸ್ಯರು ಮತ್ತು 3438 ಕೋಟಿ ರೂಪಾಯಿ ಠೇವಣಿ ಹೊಂದಿದೆ. 2731 ಕೋಟಿ ರೂಪಾಯಿ ಸಾಲ ಸೌಲಭ್ಯ ಒದಗಿಸಿ, 35.01 ಕೋಟಿ ರೂಪಾಯಿ ಲಾಭ ಗಳಿಸಿದೆ. ಶಾಸಕ ಎಂ. ಕೃಷ್ಣಪ್ಪ ಅವರು ಪೂರ್ಣ ಪ್ರಜ್ಞ ನಗರದಲ್ಲಿ 197 ನೇ ನೂತನ ಶಾಖೆಗೆ ಚಾಲನೆ ನೀಡಿ ಶುಭ ಕೋರಿದರು. ನಮ್ಮ ಕ್ಷೇತ್ರದಲ್ಲಿ ಬ್ಯಾಂಕ್ ನ ಹೊಸ ಶಾಖೆ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಪ್ರತಿಯೊಬ್ಬರಿಗೂ ಬ್ಯಾಂಕ್ ಸೌಲಭ್ಯ ದೊರೆಯಬೇಕು. ಇದಕ್ಕಾಗಿ ಬ್ಯಾಂಕ್ ಶಾಖೆಗಳು ಹೆಚ್ಚಿದಷ್ಟು ಜನ ಸಾಮಾನ್ಯರಿಗೆ ಅನುಕೂಲವಾಗುತ್ತದೆ. ಬ್ಯಾಂಕ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಾಕರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಕಿವಿಮಾತು ಹೇಳಿದರು.
Year End: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭ: ನಗರದಲ್ಲಿ ಹೆಚ್ಚಿದ ಪೋಲಿಸ್ ಭದ್ರತೆ
ಬೀರೇಶ್ವರ ಕೋ ಅಪರೇಟಿವ್ ಬ್ಯಾಂಕ್ ಎಕ್ಸಂಬಾದ ಉಪ ಪ್ರಧಾನ ವ್ಯವಸ್ಥಾಪಕರಾದ ಬಹಾದ್ದೂರ್ ಗುರುವ ಮಾತನಾಡಿ, ಕೋರ್ ಬ್ಯಾಂಕಿಂಗ್ ವಲಯದಲ್ಲಿ ಸಹಕಾರಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರನ್ನು ಹಣಕಾಸು ವಲಯಕ್ಕೆ ಸೇರ್ಪಡೆ ಮಾಡುವ ಮಹತ್ವಾಕಾಂಕ್ಷೆಯನ್ನು ಬ್ಯಾಂಕ್ ಹೊಂದಿದೆ. ಜನ ಸಾಮಾನ್ಯರಿಗೆ ಅನುಕೂಲ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇವೆ ಎಂದರು. ಬನಶಂಕರಿ ಮೂರನೇ ಹಂತದಲ್ಲಿ 196 ನೇ ಶಾಖೆಗೆ ಬಸವನಗುಡಿ ಶಾಸಕರಾದ ರವಿ ಸುಬ್ರಮಣ್ಯ ಅವರು ಚಾಲನೆ ನೀಡಿದರು.