ಬೆಂಗಳೂರು: ಹೊಸವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಸಿಲಿಕಾನ್ ಸಿಟಿ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಪಬ್, ಪಾರ್ಟಿ ಲಾನ್, ಫಾರ್ಮ್ಹೌಸ್ನಲ್ಲಿ ತಯಾರಿ ಜೋರಾಗಿದೆ. ಹಾಗಾಗಿ ಹೊಸವರ್ಷ ದಿನಾಚರಣೆ ಆಚರಣೆಗೆ ಪೊಲೀಸ್ ಭದ್ರತೆ ವಿಚಾರ ಕುರಿತು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಇಂದು ಮತ್ತೆ ಸುದ್ದಿಗೋಷ್ಠಿ ನಡೆಸಿದರು.
ಹಾಗೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ವಿವಿಧ ಇಲಾಖೆಗಳು ಸಭೆ ನಡೆಸಿ ಕೆಲವೊಂದು ನಿಯಮ ಜಾರಿಗೊಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ (B Dayanand) ಈ ಬಾರಿ ಸಿಲಿಕಾನ್ ಸಿಟಿಯ ಎಂಜಿ ರೋಡ್, ಬ್ರಿಗೆಡ್ ರೋಡ್, ರೆಸಿಡೆನ್ಸಿ ರೋಡ್, ಟ್ರಿನಿಟಿ ಸರ್ಕಲ್, ಫಿನಿಕ್ಸ್ ಮಾಲ್, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ, ಸ್ಟಾರ್ ಹೋಟೆಲ್ಗಳು ಸೇರಿದಂತೆ ಪಬ್ ಕ್ಲಬ್ಗಳಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ.
ನಗರದಲ್ಲಿ ಮಾತನಾಡಿದ ಅವರು,ಹೊಸವರ್ಷ ದಿನಾಚರಣೆ ಆಚರಣೆಗೆ ಈಗಾಗಲೇ ಮಾರ್ಗಸೂಚಿ ನೀಡಲಾಗಿದೆ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಕೂಡ ಮಾಡಲಾಗ್ತಿದೆ ಡಿ.31 ರಂದು ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಿದ್ದಾರೆ
ಎಂಜಿ ರಸ್ತೆ,ಬ್ರಿಗೆಡ್ ರಸ್ತೆ,ಕಬ್ಬನ್ ಪಾರ್ಕ್ ನಲ್ಲಿ ಬಂದೋಬಸ್ತ್ ಕೈಗೊಳ್ಳಲಾಗುತ್ತೆ 400 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತೆ ಸ್ಕೈ ಸೆಂಟ್ರಿ ಕೂಡ ಭದ್ರತೆಯಲ್ಲಿ ಇರಲಿದ್ದಾರೆ ಎಂದು ತಿಳಿಸಿದರು.
ಹೊಸ ವರ್ಷಕ್ಕೆ ನಗರಾದ್ಯಂತ ಸುಮಾರು 10 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಕ್ಲಬ್ ಗಳು, ರೆಸ್ಟೋರೆಂಟ್ಗಳು ಪಾರ್ಟಿಗಳು ನಿಗದಿತ ಸಮಯಕ್ಕೆ ಮುಗಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಮಧ್ಯರಾತ್ರಿ ಒಂದು ಗಂಟೆಯವರೆಗೆ ಮಾತ್ರ ಕ್ಲಬ್ಗಳು, ರೆಸ್ಟೋರೆಂಟ್ಗಳಿಗೆ ಅನುಮತಿ ನೀಡಲಾಗಿದೆ. ಸಮಯ ಮಿರಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಅಹಿತರಕರ ಘಟನೆಗಳು, ಡ್ರಗ್ಸ್ ಪಾರ್ಟಿಗಳು ಗಮನಕ್ಕೆ ಬಂದರೆ 112ಕ್ಕೆ ಕರೆ ಮಾಡಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.