ಹುಬ್ಬಳ್ಳಿ: ಶಕ್ತಿ ಯೋಜನೆ ಎಫೆಕ್ಟ್ ಹಿನ್ನಲೆ ಸೀಟ್ಗಾಗಿ ಬಸ್ನಲ್ಲಿ ಮಹಿಳೆಯರು ಕಿತ್ತಾಡಿಕೊಂಡ ಘಟನೆ ಹಳೇ ಹುಬ್ಬಳ್ಳಿಯಿಂದ ಕಿಮ್ಸ್ ಕಡೆ ಹೊರಟಿದ್ದ ಬಸ್ನಲ್ಲಿ ನಡೆದಿದೆ. ರಾಜ್ಯ ಸರ್ಕಾರವು ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿ ಮಾಡಿದ ಹಿನ್ನಲೆ ಸೀಟ್ಗಾಗಿ ಗಲಾಟೆಯ ದೃಶ್ಯಗಳು ಸರ್ವೇ ಸಾಮಾನ್ಯವಾಗಿದೆ.
ಅದರಂತೆ ಇಂದು ಕೂಡ ಹುಬ್ಬಳ್ಳಿ ಬಸ್ವೊಂದರಲ್ಲಿ ಯಾವುದೇ ಸೀಟ್ ಇರಲಿಲ್ಲ. ಈ ವೇಳೆ ಇಬ್ಬರು ಮಹಿಳೆಯರು ಸೀಟ್ಗಾಗಿ ಜಡೆ ಜಗಳವಾಡಿದ್ದಾರೆ. ಇನ್ನು ಇಬ್ಬರು ಮಹಿಳೆಯರ ಜಡೆ ಜಗಳ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.