ಚಾಮರಾಜನಗರ: 17ಕ್ಕೂ ಅಧಿಕ ಆನೆಗಳ ಹಿಂಡು ಜಮೀನುಗಳಿಗೆ ಲಗ್ಗೆ ಇಟ್ಟು ರೈತರಿಗೆ ಆತಂಕ ಸೃಷ್ಟಿ ಮಾಡಿರುವ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಅರಳವಾಡಿಯಲ್ಲಿ ನಡೆದಿದೆ. ತಮಿಳುನಾಡಿನ ಅರಳವಾಡಿ ಹಾಗೂ ಚಾಮರಾಜನಗರ ಗಡಿಗೂ ಕೇವಲ 6-7 ಕಿಲೋ ಮೀಟರ್ ದೂರವಿದ್ದು, ಸದ್ಯ ಬೆಳೆ ನಷ್ಟದ ಆತಂಕದಲ್ಲಿ ರೈತರಿದ್ದಾರೆ.
ಆಹಾರ ಅರಸಿ ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿರುವ ಆನೆ ಹಿಂಡನ್ನು ಕಂಡ ರೈತರು ಕಂಗಲಾಗಿದ್ದು, ಅವುಗಳನ್ನು ಮತ್ತೇ ಕಾಡಿಗಟ್ಟಲು ಹರಸಾಹಸವನ್ನೇ ಪಡುತ್ತಿದ್ದಾರೆ. ಕರ್ನಾಟಕ ಹಾಗೂ ತಮಿಳುನಾಡು ಗಡಿಯಲ್ಲಿ ಅರಣ್ಯ ಪ್ರದೇಶವಿದ್ದು, ಯಾವುದೇ ಆನೆ ಕಂದಕ ನಿರ್ಮಾಣ ಮಾಡದಿರುವುದರಿಂದ ಆಗಾಗ್ಗೆ ಜಮೀನುಗಳತ್ತ ಕಾಡನೆಗಳು ಲಗ್ಗೆ ಹಾಕಲಿವೆ. ಅಲ್ಲಿನ ಅರಣ್ಯ ಇಲಾಖೆಯವರು ಕಾಡಿಗಟ್ಟುವ ಪ್ರಯತ್ನ ಮಾಡುತ್ತಿದ್ದಾರೆ.