ಹುಬ್ಬಳ್ಳಿ : ರಾಜ್ಯದಲ್ಲಿರುವುದು ಸಂವಿಧಾನ, ಬಸವ ಹಾಗೂ ಅಂಬೇಡ್ಕರ್ ತತ್ವದ ಮೇಲೆ ನಡೆಯುತ್ತಿರುವ, ಎಲ್ಲರನ್ನೂ ಒಳಗೊಂಡ ಸರ್ಕಾರ. ಆದರೆ ಹಿಂದಿನ ಬಿಜೆಪಿ ಸರ್ಕಾರ ಸಂವಿಧಾನ ಬದಿಗೊತ್ತಿ ಹಿಂದುತ್ವದ ಅಡಿ ನಡೆಯುತ್ತಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿ, ಆಗ ಸ್ಪೀಕರ್ ಹುದ್ದೆಯಲ್ಲಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾನು ಆರೆಸ್ಸೆಸ್ನಿಂದ ಬಂದವನು ಎಂದು ಪದೇ ಪದೆ ಹೇಳುತ್ತಿದ್ದರು.
ಸರ್ಕಾರಗಳು ನಡೆಯುವುದು ಭಗವದ್ಗೀತೆ, ಬೈಬಲ್, ಕುರಾನ್ ಆಧಾರದ ಮೇಲಲ್ಲ. ಸಂವಿಧಾನದ ಅಡಿ. ಆ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ, ಇನ್ನು ಪಿಎಂ ಮಾಡ್ತಾರಾ ಎನ್ನುವ ಮಾಜಿ ಡಿಸಿಎಂ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರು ಮೊದಲು ತಮ್ಮ ಮಗನಿಗೆ ಟಿಕೆಟ್ ಕೊಡಿಸಲಿ’ ಎಂದು ತಿರುಗೇಟು ನೀಡಿದರು.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ”ಇಂಡಿಯಾ” ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಪ್ರಸ್ತಾವನೆಯನ್ನು ಪುತ್ರ, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ವಾಗತಿಸಿದ್ದಾರೆ. ಪ್ರಧಾನಿ ಹುದ್ದೆಗೆ ಕನ್ನಡಿಗರ ಹೆಸರು ಪ್ರಸ್ತಾಪವಾಗಿರೋದು ಒಳ್ಳೆಯ ಬೆಳವಣಿಗೆ, ಕನ್ನಡಿಗರೊಬ್ಬರು ಪ್ರಧಾನಿ ಆಗುತ್ತಾರೆ ಅಂದ್ರೆ ಬೇಡ ಅಂತೀರಾ? ಆಗುವುದೆಲ್ಲವೂ ಒಳ್ಳೆಯದು ಎಂದು ಹೇಳಿದ್ದಾರೆ.