ಇಸಾಬ್ಗೋಲ್ ಹಸ್ಕ್ (ISABGOL) ಅನ್ನು ಸೈಲಿಯಮ್ ಹೊಟ್ಟು ಎಂದೂ ಕರೆಯುತ್ತಾರೆ. ಇದನ್ನು ಪ್ಲಾಂಟಗೋ ಒವಾಟಾ ಅಥವಾ ಮರುಭೂಮಿಯಲ್ಲಿ ಬೆಳೆಯುವ ಗೋಧಿಯ ಬೀಜಗಳ ಹೊಟ್ಟು.
ತೂಕ ಇಳಿಸಲು ಮತ್ತು ಜೀರ್ಣಾಂಗದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುವ ಈ ಇಸಬ್ಗೋಲ್ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅವುಗಳು ಯಾವುವು ಎಂದರೆ,
⦁ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳಲು
⦁ ಮಧುಮೇಹ ನಿವಾರಣೆ ಆಗಲು
⦁ ಜೀರ್ಣಕ್ರೀಯೆ ವೃದ್ಧಿ
⦁ ಮುಖದ ಹೊಳಪು
⦁ ಕೂದಲು ದಟ್ಟವಾಗಿ ಬೆಳೆಯಲು
ಬೊಜ್ಜು ಕರಗಿ ಸಣ್ಣ ಆಗ್ಬೇಕು ಅನ್ನೋರು ಪ್ರತಿದಿನ ಇದನ್ನು ಮಿಸ್ ಮಾಡದೇ ಟ್ರೈ ಮಾಡಿ. ಒಂದು ಲೋಟ ಬೆಚ್ಚಗೆ ಇರುವ ನೀರಿಗೆ ಅಥವಾ ಹಾಲಿಗೆ ಒಂದು ಚಮಚ ಇಸಾಬ್ಗೋಲ್ ಹಸ್ಕ್ ಅನ್ನು ಮಿಕ್ಸ್ ಮಾಡಿ 10 ನಿಮಿಷ ಬಿಟ್ಟು ಅಥವಾ ಮಿಕ್ಸ್ ಮಾಡಿದ ಕೂಡಲೇ ಕುಡಿಯಬೇಕು.
ಖಾಲಿ ಹೊಟ್ಟೆಯಲ್ಲಿ ಸೇವಿಸಿ
ಬೇಗನೆ ಸಣ್ಣ ಆಗಲು ಒಂದು ಚಮಚ ನಿಂಬೆ ರಸವನ್ನು ಬೆರೆಸಬಹುದು. ಅದಾದ ನಂತರ 2 ಲೋಟ ನೀರನ್ನು ಕುಡಿಯಬೇಕು. ಇದನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯೋದ್ರಿಂದ ಒಳ್ಳೆಯ ಫಲಿತಾಂಶವನ್ನು ನೀವು ಕಾಣಬಹುದು. ಇದನ್ನು ಶರಬತ್ತು ರೀತಿ ಮಾಡಿಕೊಂಡು ಕುಡಿಯಬಹುದು.