ನವದೆಹಲಿ: ಅಗ್ನಿಪಥ್ (Agnipath Scheme) ನೇಮಕಾತಿ ಯೋಜನೆಯನ್ನು ಪರಿಚಯಿಸುವ ಮೂಲಕ ಕೇಂದ್ರ ಸರ್ಕಾರವು ಅಸಂಖ್ಯಾತ ಯುವಕರ ಕನಸುಗಳನ್ನು ನಾಶಪಡಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ನಲ್ಲಿ ಕಾಂಗ್ರೆಸ್ ನಾಯಕ ಯುವಕರ ಗುಂಪಿನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಯುವಕರು ಬಿಹಾರದ ಚಂಪಾರಣ್ನಿಂದ ಬಂದವರು ಎಂದು ಹೇಳಿದ್ದಾರೆ. ನಿರುದ್ಯೋಗದ ಸಮಸ್ಯೆಯನ್ನು ‘ಬೀದಿಗಳಿಂದ ಸಂಸತ್ತಿನವರೆಗೆ’ ಎತ್ತುವವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ತಾತ್ಕಾಲಿಕ ನೇಮಕಾತಿಗೆ ಅಗ್ನಿವೀರ್ ಯೋಜನೆ ಜಾರಿಗೊಳಿಸಿ, ಸೇನೆ ಮತ್ತು ಭಾರತೀಯ ವಾಯುಪಡೆಯ ಶಾಶ್ವತ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸುವ ಮೂಲಕ ಸರ್ಕಾರವು ಅಸಂಖ್ಯಾತ ಯುವಕರ ಕನಸನ್ನು ನುಚ್ಚುನೂರು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಸತ್ಯಾಗ್ರಹದ ನಾಡು’ ಚಂಪಾರಣ್ನಿಂದ ದೆಹಲಿಗೆ ಬರಲು 1,100 ಕಿಲೋಮೀಟರ್ಗಳಷ್ಟು ಪಾದಯಾತ್ರೆ ಮಾಡಿರುವ ಯುವಕರ ಹೋರಾಟವನ್ನು ಮಾಧ್ಯಮಗಳು ಪ್ರಸಾರ ಮಾಡದಿರುವುದು ಬೇಸರದ ಸಂಗತಿಯಾಗಿದೆ. ಉದ್ಯೋಗದ ಸಮಸ್ಯೆಯನ್ನು ಬೀದಿಗಳಿಂದ ಸಂಸತ್ತಿನ ವರೆಗೆ ಪ್ರಶ್ನಿಸುವ ಯುವಕರೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ.