ಜೊಹಾನ್ಸ್ಬರ್ಗ್: ಕನ್ನಡಿಗ ಕೆ.ಎಲ್ ರಾಹುಲ್ ಅಮೋಘ ಶತಕವನ್ನು ಸಿಡಿಸಿ ಭಾರತ ತಂಡಕ್ಕೆ ಆಸರೆಯಾಗಿದ್ದಾರೆ
ಈ ಬ್ಯಾಟಿಂಗ್ ಸಾಹಸದಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 245 ರನ್ ಬಾರಿಸಿದೆ.
8 ವಿಕೆಟ್ ಕಳೆದುಕೊಂಡು 208 ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಭಾರತ 245 ರನ್ ಗಳಿಸಿ ಆಲೌಟ್ ಆಯಿತು. 70 ರನ್ ಗಳಿಸಿದ್ದ ರಾಹುಲ್(KL Rahul) ದ್ವಿತೀಯ ದಿನದಾಟದಲ್ಲಿ 31 ರನ್ ಬಾರಿಸಿ ಶತಕ ಪೂರ್ತಿಗೊಳಿಸಿದರು. ಸಿರಾಜ್ 5 ರನ್ ಗಳಿಸಿದರೂ ರಾಹುಲ್ಗೆ ಮತ್ತೊಂದು ತುದಿಯಲ್ಲಿ ಉತ್ತಮ ಸ್ಟ್ಯಾಂಡ್ ನೀಡಿದರು. ಅವರು 22 ಎಸೆತಗಳನ್ನು ಎದುರಿಸಿ ನಿಂತರು.
ಸೆಂಚುರಿಯನ್ನಲ್ಲಿ ಪ್ರವಾಸಿ ತಂಡದ ಆಟಗಾರನೊಬ್ಬ ಸತತವಾಗಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ರಾಹುಲ್ ಪಾತ್ರವಾಗಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಒಟ್ಟು 14 ಬೌಂಡರಿ ಮತ್ತು 4 ಸೊಗಸಾದ ಸಿಕ್ಸರ್ ನೆರವಿನಿಂದ 101 ರನ್ ಗಳಿಸಿ ಬರ್ಗರ್ಗೆ ವಿಕೆಟ್ ಒಪ್ಪಿಸಿದರು. ಅವರು ನಿಂತು ಆಡದೇ ಹೋಗಿದ್ದರೆ ಭಾರತ 150 ರನ್ಗಳಿಸುವುದು ಕೂಡ ಕಷ್ಟವಾಗುತ್ತಿತ್ತು. ತಂಡದ ಬಹುಪಾಲು ಮೊತ್ತ ರಾಹುಲ್ ಅವರದ್ದೇ ಆಗಿತ್ತು.