ಸೆಂಚೂರಿಯನ್: ಭಾರತದ (Team India) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನ ಎರಡನೇ ದಿನ ದಕ್ಷಿಣ ಆಫ್ರಿಕಾ (South Africa) ಮೇಲುಗೈ ಸಾಧಿಸಿದ್ದು ಮೊದಲ ಇನ್ನಿಂಗ್ಸ್ನಲ್ಲಿ 11 ರನ್ ಮುನ್ನಡೆ ಸಾಧಿಸಿದೆ.
ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದ ಎಲ್ಗರ್ ಔಟಾಗದೇ 140 ರನ್ (211 ಎಸೆತ, 23 ಬೌಂಡರಿ). ಈ ಶತಕದ ಮೂಲಕ ಡೀನ್ ಎಲ್ಗರ್ ಅವರು ದಿಗ್ಗಜರಾದ ಗ್ಯಾರಿ ಕರ್ಸ್ಟನ್ ಮತ್ತು ಹರ್ಷಲ್ ಗಿಬ್ಸ್ ಬಳಿಕ ತವರಿನಲ್ಲಿ ಭಾರತದ ವಿರುದ್ಧ ಟೆಸ್ಟ್ ಶತಕ ಬಾರಿಸಿದ ಮೂರನೇ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಡೇವಿಡ್ ಬೆಡಿಂಗ್ಹ್ಯಾಮ್ 56 ರನ್ ಹೊಡೆದರೆ ಟೋನಿ ಡಿ ಜೋರ್ಜಿ 28 ರನ್ ಹೊಡೆದು ಔಟಾದರು. ಮಂದ ಬೆಳಕಿನ ಕಾರಣ ಇಂದು ದಕ್ಷಿಣ ಆಫ್ರಿಕಾ 66 ಓವರ್ ಮಾತ್ರ ಎದುರಿಸಿತು. ಬುಮ್ರಾ ಮತ್ತು ಸಿರಾಜ್ ತಲಾ 2 ವಿಕೆಟ್ ಪಡೆದರೆ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದರು
ಮೊದಲ ದಿನ 59 ಓವರ್ಗಳಿಗೆ 8 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿದ್ದ ಭಾರತ ಇಂದು 37 ರನ್ ಸೇರಿಸಿ ಆಲೌಟ್ ಆಯ್ತು. 70 ರನ್ ಗಳಿಸಿದ್ದ ಕೆಎಲ್ ರಾಹುಲ್ (KL Rahul) ಇಂದು 31 ರನ್ ಸೇರಿಸಿ ಶತಕ ಹೊಡೆದು ಅಂತಿಮವಾಗಿ 101 ರನ್ (137 ಎಸೆತ, 14 ಬೌಂಡರಿ, 4 ಸಿಕ್ಸರ್) ಗಳಿಸಿ ಔಟಾದರು.