ಬೆಂಗಳೂರು: ಲೋಕಸಭಾ ಚುನಾವಣೆ ಟಾಸ್ಕ್ ಒಂದು ಕಡೆಯಾದ್ರೆ ಸದ್ಯ ಪಕ್ಷದ ಡ್ಯಾಮೇಜ್ ಕೊಡುವಂತಹ ನಾಯಕರಿಗೆ ಕಡಿವಾಣ ಹಾಕಲೇಬೇಕೆಂಬ ನಿರ್ಣಯವನ್ನ ತೆಗೆದುಕೊಳ್ಳಲಾಗಿದೆ. ಶಾಸಕ ಯತ್ನಾಳ್ ಅವರ ಹೇಳಿಕೆಗಳು ಪಕ್ಷಕ್ಕೆ ಡ್ಯಾಮೇಜ್ ಅಗ್ತಿದೆ ಅಂತಾ ಪದಾಧಿಕಾರಿಗಳ ಸಭೆಯಲ್ಲಿ ಯತ್ನಾಳ್ ವಿರುದ್ಧ ಒಕ್ಕೊರಲಿನಿಂದ ಖಂಡಿಸಲಾಯ್ತು. ಯತ್ನಾಳ್ ಕಾಂಗ್ರೆಸ್ ಏಜೆಂಟ್ ಥರ ವರ್ತಿಸುತ್ತಿದ್ದಾರೆ ಅವರ ಹೇಳಿಕೆಯಿಂದ ನಮ್ಮ ಮೇಲೆ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುವಂತಾಗಿದೆ.
ದಿಗಂತ್’ಗೆ ಕಿಚ್ಚ ಸಾಥ್..! ”ಎಡಗೈ ಅಪಘಾತಕ್ಕೆ ಕಾರಣ” ಸಿನಿಮಾದ ಟೀಸರ್ ರಿಲೀಸ್ ಮಾಡಲಿದ್ದಾರೆ ಸುದೀಪ್
ಬಿಜೆಪಿ ಹಿರಿಯ ನಾಯಕರ ವಿರುದ್ಧ ಹೇಳಿಕೆಗಳನ್ನ ಕೊಟ್ಟಿ ಕಾಂಗ್ರೆಸ್ ನಾಯಕರ ಜೊತೆ ಅಡ್ಜಸ್ಟ್ ಮೆಂಟ್ ಮಾಡಿಕೊಂಡು ತಮ್ಮ ಕೆಲಸಗಳನ್ನು ಮಾಡಿಸ್ಕೊತಿದಾರೆ. ವಿಜಯಪುರದಲ್ಲಿ ಅವರೊಬ್ಬರು ಮಾತ್ರ ಗೆದ್ದಿದ್ದಾರೆ, ಉಳಿದ ಪಕ್ಷದ ಅಭ್ಯರ್ಥಿಗಳಿಗೆ ಸೋಲಾಗಿದೆ. ಇನ್ನೂ ಎಷ್ಟು ದಿನ ಹೀಗೇ ಸಹಿಸಿಕೊಂಡು ಕೂರಬೇಕು ಕಾರ್ಯಕರ್ತರಿಗೆ ಯಾವ ಸಂದೇಶ ಕೊಡಬೇಕು ಯತ್ನಾಳ್ ವಿರುದ್ಧ ದೂರು ನೀಡಿ ಉಚ್ಚಾಟನೆಗೆ ಹೈಕಮಾಂಡ್ ಬಳಿ ಮನವಿ ಮಾಡಬೇಕಂತ ಒಮ್ಮತದ ನಿರ್ಣಯಗಳನ್ನ ಮಾಡಲಾಯ್ತು..