ಬಾಗಲಕೋಟೆ: ಬಿಜೆಪಿಯವರು (BJP) ಪಾಪ ಅವರು ಕನಸು ಕಾಣುತ್ತಿದ್ದಾರೆ. ಇವರಿಗೆ ಜನ ಯಾವತ್ತಾದರೂ ಬಹುಮತ ಕೊಟ್ಟಿದ್ದಾರಾ ಎಂದು ನಿರಾಣಿಗೆ (Murugesh Nirani) ಸಚಿವ ಆರ್ ಬಿ ತಿಮ್ಮಾಪುರ್ (RB Timmapur) ತಿರುಗೇಟು ನೀಡಿದ್ದಾರೆ. ಆರು ತಿಂಗಳಲ್ಲಿ ಸರ್ಕಾರ ಢಮಾರ್ ಎಂಬ ಮಾಜಿ ಸಚಿವ ನಿರಾಣಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,
ಅಡ್ಡದಾರಿ ಹಿಡಿದು ಹೋಗಬೇಕು ಎನ್ನುತ್ತಾರೆ. ಅಡ್ಡದಾರಿಯಲ್ಲಿ ಹೋದರೆ ಯಶಸ್ವಿಯಾಗುವುದಿಲ್ಲ. ಪಾಪ ಕನಸು ಕಾಣುತ್ತಿದ್ದರೆ ಕಾಣಲಿ. ಅದಕ್ಕೆ ನಾವು ಬೇಡ ಎನ್ನುವುದಿಲ್ಲ ಎಂದು ಟಾಂಗ್ ನೀಡಿದರು. ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ್ (Shivanand Patil) ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿವಾನಂದ ಪಾಟೀಲರು ಯಾಕೆ ಆ ರೀತಿ ಹೇಳಿದ್ದೇನೆ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ದಿಗಂತ್’ಗೆ ಕಿಚ್ಚ ಸಾಥ್..! ”ಎಡಗೈ ಅಪಘಾತಕ್ಕೆ ಕಾರಣ” ಸಿನಿಮಾದ ಟೀಸರ್ ರಿಲೀಸ್ ಮಾಡಲಿದ್ದಾರೆ ಸುದೀಪ್
ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದರು. ಬಿಜೆಪಿ ಅವರಿಗೆ ರೈತರ ಬಗ್ಗೆ ಯಾವ ಕಾಳಜಿ ಇದೆ? ಯಾವ್ಯಾವ ಮಾತುಗಳನ್ನು ತಿರುಚಿ ಮಾತಾಡಬೇಕು ಎನ್ನುವುದು ಅವರಿಗೆ ಗೊತ್ತಿದೆ. 5 ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ? ಕೃಷಿ ಹೊಂಡ ಬಂದ್ ಮಾಡಿದರು. ಎಲ್ಲಾ ಸಬ್ಸಿಡಿ ಬಂದ್ ಮಾಡಿದರು. ರೈತರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ (BJP) ಅವರಿಗಿಲ್ಲ ಎಂದು ಕಿಡಿಕಾರಿದರು.