ವಿಜಯಪುರ: “ವೀರಶೈವ ಲಿಂಗಾಯತ” ಎಂಬುದು ಹಿಂದೂ ಸಂಸ್ಕೃತಿಯ ಭಾಗವಾಗಿದ್ದು ಅಲ್ಲಿಯೂ ಶಿವನೇ ಇಲ್ಲಿಯೂ ಶಿವನೇ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಲವಾಗಿ ಪ್ರತಿಪಾದಿಸಿದ್ದಾರೆ. ಲಿಂಗಾಯತರು ಹಿಂದೂಗಳಲ್ಲ ಎಂಬ ಕೆಲವರ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತ್ಯೇಕ ಧರ್ಮದ ಚರ್ಚೆ ಆರಂಭಿಸಿದ್ದಾರೆ.
ಇದರಲ್ಲಿ ಸಿದ್ದರಾಮಯ್ಯನವರು 2018ರಲ್ಲಿ ಸೃಷ್ಟಿಸಿದ್ದ ಗೊಂದಲದ ಮುಂದುವರಿದ ಭಾಗ ಎಂದು ಆರೋಪಿಸಿದ್ದಾರೆ. ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದು ಮಾಡುವ ವಿಚಾರ ಅಖಿಲ ಭಾರತ ವೀರಶೈವ ಮಹಾಸಭಾದ 24 ನೇ ಮಹಾಧಿವೇಶನದಲ್ಲಾದ ನಿರ್ಣಯ, ಇದರೊಂದಿಗೆ ಲಿಂಗಾಯತರು ಹಿಂದೂಗಳಲ್ಲಾ ಎಂಬ ಕೆಲ ನಾಯಕರ ಹೇಳಿಕೆಗಳ ಬಗ್ಗೆ ಪರ- ವಿರೋಧ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಯತ್ನಾಳ್ ಅವರು ಈ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಗಳನ್ನು ಮಾಡಿರುವ ಅವರು ಪ್ರತ್ಯೇಕ ಧರ್ಮ ವಿಚಾರವನ್ನು ಮತ್ತೆ ಎತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು ಹಿಂದುತ್ವ ಈ ನೆಲದ ಆತ್ಮವಾಗಿದ್ದು ಬಸವಣ್ಣನವರು ಆರಾಧಿಸಿದ ಲಿಂಗವೂ ಈಶ್ವರನ ಅಂಶವೇ ಎಂದು ತಿಳಿಸಿದ್ದಾರೆ. “ಲಿಂಗಾಯತರು ಹಿಂದೂಗಳಲ್ಲ ಎಂಬ ಕೆಲವರ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು,
ದಿಗಂತ್’ಗೆ ಕಿಚ್ಚ ಸಾಥ್..! ”ಎಡಗೈ ಅಪಘಾತಕ್ಕೆ ಕಾರಣ” ಸಿನಿಮಾದ ಟೀಸರ್ ರಿಲೀಸ್ ಮಾಡಲಿದ್ದಾರೆ ಸುದೀಪ್
ಹಿಂದೆ ಪ್ರತ್ಯೇಕ ಧರ್ಮದ ರೂವಾರಿಯಾಗಿದ್ದ ಸಿದ್ದರಾಮಯ್ಯನವರ ಯೋಜನೆಯ ಮುಂದುವರೆದ ಭಾಗವಾಗಿದೆ. ಹಿಂದುತ್ವ ಈ ನೆಲದ ಆತ್ಮ, ಬಸವಣ್ಣನವರು ಆರಾಧಿಸಿದ ಲಿಂಗವೂ ಈಶ್ವರನ ಅಂಶವೇ, ಹಿಂದುತ್ವ ಬದುಕುವ ದಾರಿ. ಜಗತ್ತಿನ ಯಾವುದಾದರೂ ಧರ್ಮ ಇನ್ನೊಬ್ಬರ ಮೇಲೆ ದಾಳಿ ಮಾಡದೆ, ಎಲ್ಲರನ್ನು ಗೌರವಿಸಿರುವುದು ಹಿಂದುತ್ವ ಮಾತ್ರ.” ಎಂದು ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.