ಬೆಂಗಳೂರು: ಬಿಜೆಪಿ ಶಾಸಕ ಯತ್ನಾಳ್ ತಮ್ನ ಬಳಿ ಇರುವ ಕೋವಿಡ್ ಭ್ರಷ್ಟಾಚಾರ ಹಗರಣದ ದಾಖಲೆಗಳನ್ನು ತನಿಖಾ ಆಯೋಗಕ್ಕೆ ಕೊಡಿ ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ. ಯತ್ನಾಳ್ ಕೇವಲ ಬಾಯಿ ಮಾತಲ್ಲಿ ಹೇಳಿದರೆ ಸಾಲದು ತಮ್ಮ ಬಳಿ ಇರುವ ಮಾಹಿತಿ ಹಾಗೂ ದಾಖಲೆಗಳನ್ನ ಜಸ್ಟಿಸ್ ಕುನ್ನಾ ಅವರ ತನಿಖಾ ಆಯೋಗಕ್ಕೆ ನೀಡಲಿ, ಬಿಜೆಪಿ ನಾಯಕರು ಯಾರು ಕೂಡ ಯತ್ನಾಳ್ ಅವರಿಗೆ ಒಂದು ನೋಟಿಸ್ ಕೂಡ ನೀಡಿಲ್ಲ.
ಶಿಸ್ತು ಕ್ರಮ ಜರುಗಿಸುವ ಬಗ್ಗೆ ಬಿಜೆಪಿಯ ಯಾವೊಬ್ಬ ಹಿರಿಯ ನಾಯಕರಿಗು ಧೈರ್ಯ ಇಲ್ಲ ವಿಜಯೇಂದ್ರ ಅವರ ಭ್ರಷ್ಟಾಚಾರದ ಕೆಲವು ದಾಖಲೆಗಳು ಯತ್ನಾಳ್ ಅವರ ಬಳಿ ಇರಬಹುದು ಹೀಗಾಗಿ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಭ್ರಷ್ಟಾಚಾರದ ಪಾಲುದಾರಿಕೆಯಲ್ಲಿ ಕೇಂದ್ರ ಬಿಜೆಪಿಯವರ ಪಾಲೂ ಇದೆ ಬಿಜೆಪಿಯವರದ್ದು ಹಗರಣಗಳ ವಿಚಾರದಲ್ಲಿ ಮೌನಂ ಸಮ್ಮತಿ ಲಕ್ಷಣಂ.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಬಿಜೆಪಿಯ ಲೂಟಿಕೋರರನ್ನೇ ಅವರ ಕಮಿಟಿಗಳ ಪದಾಧಿಕಾರಿಗಳಾಗಿದ್ದಾರೆ, ಯಾರೆಲ್ಲ ಭ್ರಷ್ಟಾಚಾರದ ಭಾಗಿಯಾಗಿದ್ದರೋ ಅವರನ್ನೇ ಕಮಿಟಿಗಳಲ್ಲಿ ಸೇರಿಸಿಕೊಂಡಿದ್ದಾರೆ, ಅದಕ್ಕೇ ವಿಜಯೇಂದ್ರ ಒಮ್ಮೆ ಶಾಸಕರಾದ್ರೂ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇವರ ಭ್ರಷ್ಟಾಚಾರಕ್ಕೆ ಸಂಪೂರ್ಣ ಬೆಂಬಲ ಕೇಂದ್ರದ ನಾಯಕರಿಂದಲೇ ಸಿಗ್ತಿದೆ ಅಂತ ದಿನೇಶ್ ಗುಂಡೂರಾವ್ ಆರೋಪ ಮಾಡಿದ್ದಾರೆ.