ಬೆಂಗಳೂರು: ಜಾತಿಗಣತಿ (Caste Census) ವರದಿ ಲೀಕ್ ಆಗಿಲ್ಲ. ವಿರೋಧ ಮಾಡುವವರು ವರದಿ ಬಂದಾಗ ಅದನ್ನು ಓದಿದ ಮೇಲೆ ಮಾತಾಡಲಿ ಎನ್ನುವ ಮೂಲಕ ಜಾತಿಗಣತಿ ವಿರೋಧ ಮಾಡುವವರಿಗೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ತಿರುಗೇಟು ಕೊಟ್ಟರು.
ಜನವರಿಯಲ್ಲಿ ಅಹಿಂದ ಸಮಾವೇಶ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಸಂಘಟನೆಗೋಸ್ಕರ ಸಮಾವೇಶ ಮಾಡ್ತಾರೆ. ಲಿಂಗಾಯತರು ಸಮಾವೇಶ ಮಾಡಿದ್ರು. ಅದರಂತೆ ಅಹಿಂದಾ ಸಮಾವೇಶ ಆಗ್ತಿದೆ. ಅನೇಕ ಬೇಡಿಕೆಗಳು ಇರಲಿದೆ. ಇದು ಲಿಂಗಾಯತ ಸಮಾವೇಶಕ್ಕೆ ಕೌಂಟರ್ ಅಲ್ಲ. ಅದು ಸಂಘಟನೆ ವಿಚಾರವಾಗಿ ಆಗುವ ಸಮಾವೇಶ ಎಂದರು.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಜಾತಿಗಣತಿ ವರದಿ ಸಿದ್ದವಾಗಿದೆ. ಅದು ಕೇವಲ ಜಾತಿಗೆ ಸೀಮಿತ ಆಗಿರುವ ಗಣತಿ ಅಲ್ಲ. ಸಾಮಾಜಿಕ, ಅರ್ಥಿಕ ಗಣತಿ ಅದು. 54 ಅಂಶಗಳಲ್ಲಿ ಗಣತಿ ಆಗಿದೆ. ಯಾರು ಪರ, ವಿರೋಧ ಮಾಡೋದು ಮುಖ್ಯ ಅಲ್ಲ. ಪ್ರಜಾಪ್ರಭುತ್ವ ಇದು. ವಿರೋಧ-ಪರ ಸಹಜ. ಮೊದಲು ವರದಿ ಸ್ವೀಕಾರ ಮಾಡೋಣ. ಮೊದಲು ವರದಿ ಓದಲಿ ಆಮೇಲೆ ವಿರೋಧದ ಬಗ್ಗೆ ನೋಡೋಣ ಎಂದು ತಿಳಿಸಿದರು.