ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯನವರು (Siddaramaiah) ಯಾವಾಗಲೂ ಬಹುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ಬಹುತ್ವವನ್ನ ಒಪ್ಪಿಕೊಂಡು, ಅಳವಡಿಸಿಕೊಂಡಿರುವುದು ಕೇವಲ ಹಿಂದೂ ಧರ್ಮ (Hindu Religion) ಮಾತ್ರ, ಬಹುತ್ವಕ್ಕೆ ಬೆಲೆ ಇರುವುದು ಹಿಂದೂ ಧರ್ಮದಲ್ಲಿಯೇ ಎಂದು ಮಾಜಿ ಸಚಿವ ಸಿ.ಟಿ.ರವಿ (CT Ravi) ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ದತ್ತ ಮಾಲೆ ಜಯಂತಿ ಕಾರ್ಯಕ್ರಮ ವಿದ್ಯುಕ್ತವಾಗಿ ಸಂಪನ್ನಗೊಂಡಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೂಡ ವಿಶೇಷ ಧನ್ಯವಾದ ಎಂದರು. ಸರ್ಕಾರದ ಪ್ರತಿನಿಧಿಯಾಗಿ ಯಾರಾದರೂ ಒಬ್ಬರು ಭಾಗವಹಿಸಬೇಕಾಗಿತ್ತು. ಸರ್ಕಾರದ ಪ್ರತಿನಿಧಿಗಳಾಗಿ ಯಾರು ಬಾರದೇ ಇರುವುದು ದುರಾದೃಷ್ಟಕರ ಹಾಗೂ ನೋವಿನ ಸಂಗತಿ ಎಂದರು.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಇದು ಮುಜರಾಯಿ ಇಲಾಖೆಗೆ ಸೇರಿದ ದತ್ತಾತ್ರೇಯ ಸ್ವಾಮಿ ದೇವಸ್ಥಾನವಾಗಿದ್ದು, ಯಾರಾದರೂ ಒಬ್ಬರು ಭಾಗವಹಿಸಬೇಕಾದದ್ದು ಕ್ರಮವಾಗಿತ್ತು. ಯಾರೂ ಭಾಗವಹಿಸದೇ ಇರುವುದು ದುರಾದೃಷ್ಟಕರ. ಅವರ ಮನಸ್ಸಿನಲ್ಲಿ ಹಿಂದೂ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿದರೆ ಜಾತ್ಯಾತೀತತೆಗೆ ಭಂಗ ಬರುತ್ತದೆ ಎಂಬ ಭಾವನೆ ಇರಬಹುದು. ಈದ್ ಮಿಲಾದ್ನಲ್ಲಿ ಪಾಲ್ಗೊಳ್ಳುತ್ತಾರೆ. ದತ್ತ ಜಯಂತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರೆ ಏನರ್ಥ? ಯಾವ ಸಂದೇಶ ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದರು.