ಅಯೋಧ್ಯೆ: ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ (Ram Lalla Pran Pratishtha) ಅಯೋಧ್ಯೆ ನಗರ ಸಿಂಗಾರಗೊಳ್ಳಲು ಶುರುವಾಗಿದೆ. ಕಾರ್ಯಕ್ರಮಕ್ಕೆ ದೇಶದ ಮೂಲೆ ಮೂಲೆಯಿಂದ ಗಣ್ಯಾತಿಗಣ್ಯರ ಆಗಮನ ಫಿಕ್ಸ್ ಆಗಿದ್ದು, ಈಗಾಗಲೇ ಅಮಂತ್ರಣ ಪತ್ರಿಕೆ ಹಂಚಿಕೆ ಕಾರ್ಯ ಶುರುವಾಗಿದೆ. ಈ ಅದ್ಧೂರಿ ಕಾರ್ಯಕ್ರಮಕ್ಕೆ ಯಾರನ್ನೆಲ್ಲ ಆಹ್ವಾನಿಸಿದ್ದಾರೆ. ಯಾವ ಕ್ಷೇತ್ರದ ಗಣ್ಯರಿಗೆ ಆಹ್ವಾನ ಪತ್ರಿಕೆ ಹಂಚಿಕೆಯಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಧಾರ್ಮಿಕ ಮುಖಂಡರು:
ಜನವರಿ 22 ರಂದು ಪ್ರಾಣ ಪ್ರತಿಷ್ಠೆಗೆ 4000 ಸಂತರಿಗೆ ಆಹ್ವಾನಿಸಲಾಗಿದ್ದು, ಭಾರತದ ಎಲ್ಲಾ ಸಂಪ್ರದಾಯಗಳ ಸಂತರನ್ನು ಆಹ್ವಾನಿಸಲಾಗಿದೆ. ಅಂಡಮಾನ್ ನಿಕೋಬಾರ್ ಕರಾವಳಿಯಲ್ಲಿ ವಾಸಿಸುವ ಧಾರ್ಮಿಕ ಮುಖಂಡರು, ಜಾರ್ಖಂಡ್ನ ಬನವಾಸಿ ಪ್ರದೇಶದ ಧಾರ್ಮಿಕ ಮುಖಂಡರು ಮತ್ತು 125 ಸಂತ ಸಂಪ್ರದಾಯಗಳ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ.
ಸನ್ಯಾಸಿ ಮತ್ತು ಬೈರಾಗಿಗಳ 13 ಅಖಾಡಗಳ 6 ದರ್ಶನಾಚಾರ್ಯರು, ಸ್ವಾಮಿ ವಾಸುದೇವಾನಂದ ಸರಸ್ವತಿ ಜ್ಯೋತಿರ್ಮಠದ ಶಂಕರಾಚಾರ್ಯ, ಗೋವರ್ಧನ ಪೀಠದ ಶಂಕರಾಚಾರ್ಯ, ಶಾರದಾ ಪೀಠದ ಶಂಕರಾಚಾರ್ಯ, ಶೃಂಗೇರಿ ಪೀಠದ ಶಂಕರಾಚಾರ್ಯರನ್ನು ಆಹ್ವಾನಿಸಲಾಗಿದೆ.
ಆಚಾರ್ಯ ಮಹಾಮಂಡಲೇಶ್ವರ ವಿಶೋಕ ನಂದ ಭಾರತಿ ಮಹಾರಾಜ್, ಅವಧೇಶಾನಂದ ಗಿರಿ, ಸಿಖ್ಖರ ಮಹಂತ್ ಜ್ಞಾನದೇವ್ ಸಿಂಗ್, ಕಾರ್ಯಾಸಿನಿ ಜಗದ್ಗುರು ಗುರುಶರಣಾನಂದ ಜಿ ಮಹಾರಾಜ್, ಬಾಬಾ ರಾಮದೇವ್, ಆನಂದಮಯಿ ಮಾ, ದಲೈಲಾಮಾ, ರವೀಂದ್ರ ಜೈನ್, ರಾಮಭದ್ರಾಚಾರ್ಯ,
ರಾಮಾನುಜಾಚಾರ್ಯ ವಿದ್ಯಾ ಭಾಸ್ಕರ್, ಗಿಯಾನಿ ಇಕ್ಬಾಲ್ ಸಿಂಗ್ ಪಾಟ್ನಾ ಸಾಹಿಬ್, ಬೌದ್ಧ ಧರ್ಮಗುರು ರಾಹುಲ್ ಬೋಧಿ ಜಿ ಮಹಾರಾಜ್ ಅವರನ್ನು ಆಹ್ವಾನಿಸಲಾಗಿದೆ. ಸ್ವಾಮಿನಾರಾಯಣ ಸಂಪ್ರದಾಯ, ಆರ್ಟ್ ಆಫ್ ಲಿವಿಂಗ್, ಗಾಯತ್ರಿ ಪರಿವಾರ ಸಮೇತ 2200 ಗೃಹಸ್ಥರನ್ನು ಪ್ರಾಣ ಪ್ರತಿಷ್ಠೆಗೆ ಆಹ್ವಾನಿಸಲಾಗಿದೆ.
ಇವರೆಲ್ಲ ಇರುತ್ತಾರೆ:
ಕ್ರೀಡಾ ಜಗತ್ತು, ವಿಜ್ಞಾನಿಗಳು, ಮಾಧ್ಯಮ ಸಂಸ್ಥೆಗಳ ಮಾಲೀಕರು, ಬರಹಗಾರರು, ಸಾಹಿತಿಗಳು, ರಂಗಭೂಮಿ ಮತ್ತು ಚಲನಚಿತ್ರದವರು, ಕವಿಗಳನ್ನು ಆಯ್ಕೆ ಮಾಡಲಾಗಿದೆ, ಕೆಲವು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರನ್ನು ಸಹ ಆಹ್ವಾನಿಸಲಾಗಿದೆ.
ಪ್ರಾಣ ತ್ಯಾಗ ಮಾಡಿದ ಕುಟುಂಬಗಳಿಗೆ ಆಹ್ವಾನ:
ರಾಮ ಮಂದಿರ ಆಂದೋಲನದಲ್ಲಿ ಪ್ರಾಣ ತ್ಯಾಗ ಮಾಡಿದ ರಾಮಭಕ್ತನ ಕುಟುಂಬದ ಸದಸ್ಯರು, ಕೈಗಾರಿಕಾ ಲೋಕದ ಮುಖ್ಯಸ್ಥರು, ತಿರುಪತಿ, ವೈಷ್ಣೋದೇವಿ, ಕಾಶಿ ವಿಶ್ವನಾಥ ದೇಗುಲ ಪ್ರಮುಖರನ್ನು ಪ್ರಾಣ ಪ್ರತಿಷ್ಠೆಗೆ ಆಹ್ವಾನಿಸಲಾಗಿದೆ.
25 ಆರ್ಎಸ್ಎಸ್ ಕಾರ್ಯಕರ್ತರು, 100 ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ಸಿಆರ್ಪಿಎಫ್ ಅಧಿಕಾರಿಗಳು ಮತ್ತು ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಅಧಿಕಾರಿಗಳಿಗೂ ಆಹ್ವಾನ ನೀಡಲಾಗಿದೆ.
ಮಾಜಿ ಪ್ರಧಾನಿ ದೇವೇಗೌಡರಿಗೂ ಆಹ್ವಾನ:
ರಾಮ್ ಲಾಲಾ ಪಟ್ಟಾಭಿಷೇಕ ಸಮಾರಂಭಕ್ಕೆ ಮಾಜಿ ಪ್ರಧಾನಿ ದೇವೇಗೌಡರನ್ನು ನೃಪೇಂದ್ರ ಮಿಶ್ರಾ, ವಿಎಚ್ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹಾಗೂ ಸಂಘದ ರಾಮ್ ಲಾಲ್ ತಂಡ ಆಹ್ವಾನಿಸಿದೆ. ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೂಡಾ ಆಹ್ವಾನಿಸಲಾಗಿದೆ. ಆರ್ಎಸ್ಎಸ್ ಅಖಿಲ ಭಾರತೀಯ ಸಂಪರ್ಕ ಪ್ರಮುಖ್ ರಾಮಲಾಲ್ ಹಾಗೂ ಇತರರು ಜೆಪಿ ನಗರದ ನಿವಾಸಕ್ಕೆ ಭೇಟಿ ಕೊಟ್ಟು ಆಹ್ವಾನ ನೀಡಿದರು.
ಟಾಟಾ, ಅಂಬಾನಿ, ಅದಾನಿಗೂ ಆಹ್ವಾನ:
ಲಾರ್ಸೆನ್ ಟೂಬ್ರೊ ಮುಖ್ಯಸ್ಥರ ಜೊತೆ, ರತನ್ ಟಾಟಾ ಅವರ ಉತ್ತರಾಧಿಕಾರಿ ಚಂದ್ರಶೇಖರನ್, ಅಂಬಾನಿ ಮತ್ತು ಅದಾನಿಗೂ ಆಹ್ವಾನ.
ಸಿನಿಮಾ, ಕ್ರೀಡೆಯ ಗಣ್ಯರು
ತಮಿಳು ಚಲನಚಿತ್ರ ನಟ ರಜನಿಕಾಂತ್, ಬ್ಯಾಡ್ಮಿಂಟನ್ ಆಟಗಾರ ಗೋಪಿಚಂದ್, ಗಾಯಕ ಗುರುದಾಸ್ ಮನ್, ಬಾಲಿವುಡ್ ನಟ ಅಮಿತಾಬ್ ಬಚ್ಚನ್, ನಟಿ ಮಾಧುರಿ ದೀಕ್ಷಿತ್, ಅರುಣ್ ಗೋವಿಲ್, ಚಲನಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್, ಮಹಾಭಾರತದಲ್ಲಿ ಕೃಷ್ಣನ ಪಾತ್ರ ನಿರ್ವಹಿಸಿದ ನಿತೀಶ್ ಭಾರದ್ವಾಜ್, ಚಲನಚಿತ್ರ ಸೆನ್ಸಾರ್ ಮಂಡಳಿಯ ಪ್ರಸೂನ್ ಜೋಶಿಯನ್ನು ಆಹ್ವಾನಿಸಿದ್ದಾರೆ. ಚಿತ್ರಕಲಾವಿದ ವಾಸುದೇವ್ ಕಾಮತ್, ಇಸ್ರೋ SAC ನಿರ್ದೇಶಕ ನಿಲೇಶ್ ದೇಸಾಯಿ, ರಾಮ ಲಲ್ಲಾ ದೇವಸ್ಥಾನದ ಕೆತ್ತನೆ ಮಾಡಿದ ಶಿಲ್ಪಿಗಳನ್ನು ಆಹ್ವಾನಿಸಲಾಗಿದೆ.