ಬೆಂಗಳೂರು: ಕೋಟಿ ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಬೆಂಗಳೂರಿನ ಮಲ್ಲೇಶ್ವರಂನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಇಂದು ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ಮೂರು ವಾರಗಳ ಹಿಂದೆ ನೋಟಿಸ್ ನೀಡಿದ್ದರೂ ಸಹ ಮಂತ್ರಿ ಮಾಲ್ ಆಡಳಿತ ವರ್ಗದವರಿಂದ ಯಾವುದೇ ರೀತಿ ಪ್ರತಿಕ್ರಿಯೆ ಸಿಕ್ಕಿಲ್ಲ. ಸುಮಾರು 53 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಬಾಕಿ ವಸೂಲಿಗೆ ಡಿಮ್ಯಾಂಡ್ ನೋಟೀಸ್ ನೀಡಿದ್ದರು ಸಹ ಪಾವತಿ ಮಾಡದ ಹಿನ್ನಲೆ,
ಕಾನೂನು ತಜ್ಞರ ಸಲಹೆ ಮೇರೆಗೆ ಮಂತ್ರಿ ಮಾಲ್ ಅನ್ನು ಸೀಝ್ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಾಲ್ ನ ಆಡಳಿತ ಮಂಡಳಿಯವರು ಮಾತ್ರ ನಮಗೆ ಯಾವುದೇ ನೋಟೀಸ್ ನೀಡದೆ ಮಾಲ್ ಗೆ ಬೀಗ ಹಾಕಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಮಾಲ್ ನಲ್ಲಿ ಸಮಯ ಕಳೆಯಲು ಬಂದ ನೂರಾರು ಜನ ಸಾರ್ವಜನಿಕರು ಮಾಲ್ ನ ಒಳ ಹೋಗಲಾಗದೆ ಹೊರಗಡೆಯೆ ನಿಂತು ಕಾಯುತ್ತಿದ್ದರು.