ಕೊಪ್ಪಳ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಕುಟೀರಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹೊತ್ತಿ ಉರದಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ನಡೆದಿದೆ. ಐತಿಹಾಸಿಕ ಪಂಪಾ ಸರೋವರದಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರು ಕೆಲ ವರ್ಷಗಳ ಹಿಂದೆ ಬಂದಾಗ, ತಾವು ಉಳಿದುಕೊಳ್ಳಲೆಂದೆ ಕುಟೀರವೊಂದನ್ನು ನಿರ್ಮಾಣ ಮಾಡಿಸಿದ್ದರು.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಅಂಜನಾದ್ರಿ, ಪಂಪಾ ಸರೋವರಕ್ಕೆ ಬಂದಾಗ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬ ಇದೇ ಕುಟಿರದಲ್ಲಿ ವಾಸ್ತವ್ಯ ಮಾಡುತ್ತಿತ್ತು. ಕುಟಿರದೊಳಗೆ ಎಸಿ ಸೇರಿದಂತೆ ಆಧುನಿಕ ಅನೇಕ ಸೌಕರ್ಯಗಳು ಇದ್ದವು. ಆದರೆ ಇಂದು ಮಧ್ಯಾಹ್ನ ಹನ್ನೆರಡು ಗಂಟೆ ಸಮಯದಲ್ಲಿ ಕುಟಿರಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕುಟಿರ ಸುಟ್ಟು ಭಸ್ಮವಾಗಿದೆ. ಕುಟಿರದ ಮೇಲೆ ಹುಲ್ಲಿನ ಹೊದಿಕೆ ಹೊದೆಸಲಾಗಿತ್ತು. ಹೀಗಾಗಿ ಬೆಂಕಿ ಇಡೀ ಕುಟಿರವನ್ನು ಆವಸರಿಸಿಕೊಂಡಿದ್ದರಿಂದ ಕುಟಿರ ಅಗ್ನಿಗಾಹುತಿಯಾಗಿದೆ.