ಇನ್ನೇನು 2023 ಮುಕ್ತಾಯವಾಗಲಿದೆ. ಈ ವರ್ಷ ಅನೇಕ ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸ್ಯಾಂಡಲ್ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ನಲ್ಲಿ ತಾರೆಯರ ಮದುವೆ ಸಂಭ್ರಮ ಜೋರಾಗಿತ್ತು. ಹೊಸ ಜೀವನ ಆರಂಭಿಸಿದ ತಾರೆಯರು ಒಂದ್ಕಡೆಯಾದರೆ, ಇನ್ನೊಂದ್ಕಡೆ ಕೆಲ ತಾರೆಯರು ಎರಡನೇ ಮದುವೆ ಮಾಡಿಕೊಂಡರು. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ತಮಿಳು ನಟಿ ಅಮಲಾ ಪೌಲ್ ಇತ್ತೀಚೆಗಷ್ಟೇ ಎರಡನೇ ಮದುವೆ ಮಾಡಿಕೊಂಡರು.
ಕನ್ನಡದ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಆಶೀಶ್ ವಿದ್ಯಾರ್ಥಿ ಅವರ ಮೊದಲ ಮದುವೆ ಮುರಿದುಬಿದ್ದಿತ್ತು. ತಮ್ಮ 60ನೇ ವಯಸ್ಸಿನಲ್ಲಿ ಆಶೀಶ್ ವಿದ್ಯಾರ್ಥಿ ಎರಡನೇ ಮದುವೆ ಮಾಡಿಕೊಂಡಿದ್ದಾರೆ. ತೆಲುಗು ನಟ ಮಂಚು ಮನೋಜ್ ಕೂಡ ಈ ವರ್ಷ ಎರಡನೇ ವಿವಾಹವಾದರು. ಬಾಲಿವುಡ್ ನಟಿ ಮಸಾಬಾ ಗುಪ್ತಾ ಕೂಡ ಸೆಕೆಂಡ್ ಮ್ಯಾರೇಜ್ ಆದರು. ಈ ಕುರಿತ ಚಿತ್ರಪಟ ಇಲ್ಲಿದೆ ನೋಡಿ…
ಮಂಚು ಮನೋಜ್ ಎರಡನೇ ಮದುವೆ
ತೆಲುಗು ನಟ ಮಂಚು ಮನೋಜ್ ಎರಡನೇ ಮದುವೆಯಾದರು. ಮೌನಿಕಾ ರೆಡ್ಡಿ ಎಂಬುವರನ್ನು ಮಂಚು ಮನೋಜ್ ವಿವಾಹವಾದರು. ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಮಂಚು ಮನೋಜ್ ಮತ್ತು ಮೌನಿಕಾ ರೆಡ್ಡಿ ವಿವಾಹ ಬಂಧನಕ್ಕೆ ಒಳಗಾದರು.
ಮಸಾಬಾ ಗುಪ್ತಾ – ಸತ್ಯದೀಪ್ ಮಿಶ್ರ
ನಟಿ ಕಮ್ ಫ್ಯಾಶನ್ ಡಿಸೈನರ್ ಮಸಾಬಾ ಗುಪ್ತಾ – ಸತ್ಯದೀಪ್ ಮಿಶ್ರ ವಿವಾಹ ಜರುಗಿತು. ಇಬ್ಬರಿಗೂ ಇದು ಎರಡನೇ ಮದುವೆ. 2015ರಲ್ಲಿ ಮಧು ಮಂತೇನ ಅವರನ್ನ ಮಸಾಬಾ ಗುಪ್ತಾ ಮದುವೆಯಾಗಿದ್ದರು. 2019ರಲ್ಲಿ ಡಿವೋರ್ಸ್ ಪಡೆದರು. ಇತ್ತ 2013ರಲ್ಲಿ ನಟಿ ಅದಿತಿ ರಾವ್ ಹೈದರಿ ಅವರಿಂದ ಸತ್ಯದೀಪ್ ಮಿಶ್ರ ವಿಚ್ಛೇದನ ಪಡೆದಿದ್ದರು.
ಅಮಲಾ ಪೌಲ್ ಎರಡನೇ ಮದುವೆ
ಈ ವರ್ಷ ಅಮಲಾ ಪೌಲ್ ಎರಡನೇ ಮದುವೆಯಾದರು. ಬಾಯ್ಫ್ರೆಂಡ್ ಜಗತ್ ದೇಸಾಯಿ ಅವರನ್ನ ಅಮಲಾ ಪೌಲ್ ವಿವಾಹವಾದರು. ಕೊಚ್ಚಿಯಲ್ಲಿ ಅಮಲಾ ಪೌಲ್ – ಜಗತ್ ದೇಸಾಯಿ ಮದುವೆ ನಡೆಯಿತು. 2017ರಲ್ಲಿ ಅಮಲಾ ಪೌಲ್ ಮೊದಲ ಮದುವೆಯಿಂದ ವಿಚ್ಛೇದನ ಪಡೆದಿದ್ದರು.
ಎರಡನೇ ಮದುವೆಯಾದ ಆಶೀಶ್ ವಿದ್ಯಾರ್ಥಿ
ಕನ್ನಡ ಸಿನಿಮಾಗಳಲ್ಲೂ ಮಿಂಚಿರುವ ಖ್ಯಾತ ನಟ ಆಶೀಶ್ ವಿದ್ಯಾರ್ಥಿ ಎರಡನೇ ಮದುವೆಯಾದರು. ಮೊದಲ ಮದುವೆಯಿಂದ ವಿಚ್ಛೇದನ ಪಡೆದ ಬಳಿಕ 60ನೇ ವಯಸ್ಸಿನಲ್ಲಿ ಅಸ್ಸಾಂ ಮೂಲದ ರೂಪಾಲಿ ಬರುವಾ ಅವರನ್ನ ಆಶೀಶ್ ವಿದ್ಯಾರ್ಥಿ ವಿವಾಹವಾದರು.