ನವದೆಹಲಿ: ರಾಮ ನನ್ನ ಹೃದಯದಲ್ಲಿದ್ದಾನೆ, ನಾನು ಅದನ್ನು ತೋರಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಮಾಜಿ ನಾಯಕ, ಹಾಲಿ ಎಸ್ಪಿ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ (Kapil Sibal) ಹೇಳಿದ್ದಾರೆ. ಅಯೋಧ್ಯೆಯಲ್ಲಿ (Ayodhya) ನಡೆಯಲಿರುವ ರಾಮ್ ಲಲ್ಲಾ (Ram Lalla) ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನೀವು ಬಯಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಶ್ರೀ
ರಾಮ ನನ್ನ ಹೃದಯದಲ್ಲಿದ್ದಾನೆ ಮತ್ತು ಯಾವುದೇ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿಲ್ಲ. ನಾನು ನಿಮಗೆ ಹೇಳುವುದು ನನ್ನ ಹೃದಯದಿಂದ ಬಂದದ್ದು. ಏಕೆಂದರೆ ನಾನು ಈ ಎಲ್ಲಾ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ರಾಮ ನನ್ನ ಹೃದಯದಲ್ಲಿದ್ದರೆ ಮತ್ತು ನನ್ನ ಪ್ರಯಾಣದುದ್ದಕ್ಕೂ ರಾಮ ನನಗೆ ಮಾರ್ಗದರ್ಶನ ನೀಡಿದರೆ, ನಾನು ಸರಿಯಾದ್ದನ್ನೇ ಮಾಡಿದ್ದೇನೆ ಎಂದರ್ಥ ಎಂದು ತಿಳಿಸಿದರು. ಇಡೀ ರಾಮಮಂದಿರ ನಿರ್ಮಾಣ ವಿಷಯ ಒಂದು ಪ್ರದರ್ಶನ. ಏಕೆಂದರೆ ಆಡಳಿತ ಪಕ್ಷದ ನಡವಳಿಕೆ,
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಸ್ವಭಾವವು ಎಲ್ಲಿಯೂ ರಾಮನನ್ನು ಹೋಲುವುದಿಲ್ಲ. ಈ ಇಡೀ ವಿಷಯ ಪ್ರದರ್ಶನವಾಗಿದೆ. ಬಿಜೆಪಿಯವರು (BJP) ರಾಮನ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ನಡವಳಿಕೆ, ಅವರ ಸ್ವಭಾವವು ರಾಮನಿಗೆ ಎಲ್ಲಿಯೂ ಹತ್ತಿರವಾಗುವುದಿಲ್ಲ. ಸತ್ಯತೆ, ಸಹನೆ, ತ್ಯಾಗ ಮತ್ತು ಇತರರನ್ನು ಗೌರವಿಸುವುದು ರಾಮನ ಕೆಲವು ಗುಣಲಕ್ಷಣಗಳು. ಆದರೆ ಅವರು ಅದಕ್ಕೆ ವಿರುದ್ಧವಾಗಿ ರಾಮಮಂದಿರವನ್ನು (Ram Mandir) ನಿರ್ಮಿಸುತ್ತಿದ್ದಾರೆ ಮತ್ತು ರಾಮನನ್ನು ವೈಭವೀಕರಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.