ಬೆಂಗಳೂರು: ಕೊರೋನಾ (Corona Virus) ಹೆಸರು ಕೇಳಿದ್ರೆ ಸಾಕು ಜನ ಬೆಚ್ಚಿಬೀಳ್ತಾರೆ. ಯಾಕೆಂದ್ರೆ ಅಲೆಗಳ ಮೇಲೆ ಅಲೆಗಳು ಅಂತಾ ಬಂದು ಜನರು ಜೊತೆ ಉದ್ಯಮಗಳು ನೆಲ ಕಚ್ಚಿ ಹೋಗಿದ್ವು. ಹೀಗಾಗಿ ಈ ಬಾರಿ ವೇಷ ಬದಲಿಸಿಕೊಂಡು ಬಂದಿರುವ ಹೊಸ ತಳಿ ಬಗ್ಗೆ ಆತಂಕ ಹೆಚ್ಚು ಮಾಡಿದೆ. ಆರೋಗ್ಯ ಇಲಾಖೆ ರೂಲ್ಸ್ ತರಲಿ ಬಿಡಲಿ ನಮಗೆ ನಾವೇ ರೂಲ್ಸ್ ಮಾಡ್ಕೋತೀವಿ ಅಂತ ಪಿಜಿ ಓನರ್ಸ್ (PG Owners) ಡಿಸೈಡ್ ಮಾಡಿದ್ದಾರೆ.
ಕೊರೊನಾ ವೈರಸ್ನಿಂದ ಪಿಜಿ ಉದ್ಯಮ ಮಾತ್ರ ಸಂಪೂರ್ಣವಾಗಿ ನೆಲಕಚ್ಚಿ ಹೋಗಿತ್ತು. ಕಳೆದ ಕೋವಿಡ್ ಅಟ್ಟಹಾಸಕ್ಕೆ ನಡುಗಿದ್ದ ಪಿಜಿ ಅಸೋಸಿಯೇಷನ್ ಇದೀಗ ಮುಂಜಾಗ್ರತವಾಗಿ ಸಭೆ ನಡೆಸಿ ಹೊರ ರಾಜ್ಯದಿಂದ ಬರುವಂತವರಿಗೆ ಆರ್ಟಿಪಿಸಿಆರ್ ಕಡ್ಡಾಯಗೊಳಿಸಿ, ಸುರಕ್ಷತಾ ಕ್ರಮಗಳ ಮೇಲೆ ಕಣ್ಣಿಟ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದೇವೆ ಎನ್ನುತ್ತಿದ್ದಾರೆ.
ಪಿಜಿ ಅಸೋಸಿಯೇಷನ್ನ ಕ್ರಮಗಳೇನು..?: ಕ್ರಿಸ್ಮಸ್ (Christmas) ರಜೆ, ಹೊಸ ವರ್ಷಾಚರಣೆ ಹಿನ್ನಲೆ ಪಿಜಿಯಿಂದ ಊರಿಗೆ ತೆರಳಿದ್ದಾರೆ. ಪಿಜಿಗೆ ಹಿಂದಿರುಗುವಾಗ ಆರೋಗ್ಯದಲ್ಲಿ ಏರುಪೇರಿದ್ರೆ ಕೂಡಲೇ ಆರ್ ಟಿಪಿಸಿಆರ್ ಟೆಸ್ಟ್ (RTPCR Test) ಮಾಡಿಸಬೇಕು. ಆರೋಗ್ಯ ಸಮಸ್ಯೆ ಇದ್ದವರು ಕಡ್ಡಾಯ ಮಾಸ್ಕ್ ಧರಿಸೋದು. ಎಲ್ಲರೂ ಕೋವಿಡ್ ಲಸಿಕೆ ಪಡೆದಿದ್ದಾರಾ ಎಂದು ತಪಾಸಣೆ ಮಾಡುವುದು. 50 ವರ್ಷ ಮೇಲ್ಪಟ್ಟವರಿದ್ರೇ ಬಿಪಿ, ಶುಗರ್ ಇದ್ದವರು ಮಾಸ್ಕ್ ಧರಿಸಬೇಕು
ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಪಿಜಿಗಳಿದ್ದು, ಲಕ್ಷಾಂತರ ಮಂದಿ ಪಿಜಿಯಲ್ಲಿರುವುದರಿಂದ ಪಿಜಿ ಮಾಲೀಕರೇ ಮುಂಜಾಗ್ರತೆಗೆ ಮುಂದಾಗಿದ್ದಾರೆ. ಯಾಕಂದ್ರೆ ಕಳೆದ ಬಾರಿಯ ಕೋವಿಡ್ಗೆ ಸಾಕಷ್ಟು ಮಂದಿ ದಿಢೀರ್ ಅಂತಾ ಪಿಜಿ ಖಾಲಿ ಮಾಡಿಕೊಂಡು ಹೋಗಿದ್ರು. ಅದೆಷ್ಟೋ ಜನ ಲಗೇಜ್ ಬಿಟ್ಟು ಹೋಗಿದ್ರು. ಅದೆಷ್ಟೋ ಪಿಜಿ ಮಾಲೀಕರು ವರ್ಷದ ಕಾಲ ಬಿಲ್ಡಿಂಗ್ಗಳು ಖಾಲಿ ಖಾಲಿಯಾಗಿದ್ದವು. ಹೀಗಾಗಿ ಈಗಿರುವಂತವರನ್ನು ಜಾಗೃತಿಯಾಗಿ ಉಳಿಸಿಕೊಂಡು ಹೋದ್ರೆ ನಮ್ಮ ಉದ್ಯಮಕ್ಕೂ ತೊಂದರೆ ಆಗುವುದಿಲ್ಲ. ಪಿಜಿಯಲ್ಲಿ ವಾಸಿಸುವಂತವರಿಗೂ ತೊಂದರೆ ಆಗುವುದಿಲ್ಲ ಸುರಕ್ಷತೆಯಿಂದ ಇರಬಹುದು ಅಂತಾ ಒಂದಿಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ ಎನ್ನುತ್ತಿದ್ದಾರೆ.
ಕಳೆದ ಬಾರಿ ಕೋವಿಡ್ ಅಲೆಗೆ ತತ್ತರಿಸಿ ಹೋಗಿದ್ದ ಪಿಜಿ ಅಸೋಸಿಯೇಷನ್, ಸರ್ಕಾರದ ಗೈಡ್ಲೈನ್ಗೂ ಮುನ್ನವೇ ಸಭೆ ನಡೆಸಿ ಒಂದಿಷ್ಟು ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.. ಅಲ್ಲದೇ ವೇಷ ಬದಲಿಸಿಕೊಂಡು ಬಂದಿರುವ ಈ ವೈರಸ್ಗೆ ಪಿಜಿ ಅಸೋಸಿಯೇಷನ್ ಮುಂಜಾಗ್ರತಾಗೊಂಡಿದೆ.