ಹುಬ್ಬಳ್ಳಿ-: ಭತ್ತದ ಹುಲ್ಲು ಸಾಗಿಸುತ್ತಿದ್ದ ಲಾರಿವೊಂದಕ್ಕೆ ವಿದ್ಯುತ್ ವೈರ ತಾಗಿ ಬೆಂಕಿ ಹೊತ್ತಿಕೊಂಡ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಗುತ್ತಿಗನೂರ ಗ್ರಾಮದಿದ್ದು, ಚಾಲಕನ ಸಮಯಪ್ರಜ್ಞಾಯಿಂದ ಬಾರಿ ಅನಾಹುತವೊಂದು ತಪ್ಪಿದೆ.
ಗುತ್ತಿಗನೂರು ಗ್ರಾಮದಿಂದ ಭತ್ತದ ಹುಲ್ಲು ಲೋಡ್ ಲಾಡಿದ ಲಾರಿ ಗ್ರಾಮದಲ್ಲಿ ಸಾಗಿ ಬರುತ್ತಿರುವ ಸಂದರ್ಭದಲ್ಲಿ ವಿದ್ಯುತ್ ವೈರ ತಾಗಿದೆ. ಇದರಿಂದ ಲಾರಿಯ ಮೇಲ್ಭಾಗದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಲಾರಿ ಚಾಲಕ ಕೂಡಲೇ ಲಾರಿಯನ್ನು ಗುತ್ತಿಗನೂರ ಗ್ರಾಮದಿಂದ ಹೊರಗಡೆ ತಂದು ನಿಲ್ಲುಸಿದ್ದಾನೆ. ಬಳಿಕ ಗ್ರಾಮಸ್ಥರ ನೇರವು ಪಡೆದುಕೊಂಡು ಅಹ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾನೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಸಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಕೊನೆಗೆ ಬೆಂಕಿನಂದಿಸಿದ್ದಾರೆ. ಅಣ್ಣಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೆಂಕಿ ನಂದಿಸಿದ ನಂತರ ಗುತ್ತಿಗನೂರು ಗ್ರಾಮಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ.
ಗ್ರಾಮದ ಹೊರವಲಯದಲ್ಲಿ ಹಲವು ಗ್ರಾಮಸ್ಥರ ಬಣವಿ ಇದ್ದು, ಒಂದುವೇಳೆ ಬೆಂಕಿ ಕಿಡಿ ಹಾರಿ ಮತ್ತೆ ಏಲಿ ಬೆಂಕಿ ಬಣವಿಗೂ ತಾಗೋ ಎಂಬ ರೈತರಲ್ಲಿ ಚಿಂತೆ ಮನೆ ಮಾಡಿತ್ತು. ಸದ್ಯ ಈಗ ಬೆಂಕಿ ನಂದಿಸಿದ್ದು, ರೈತರು ಆತಂಕ ದೂರವಾಗಿದೆ.