ಮಳೆಗಾಲ ಶುರುವಾಗಿದೆ, ಇದರಿಂದ ಸಿಲಿಕಾನ್ ಸಿಟಿ ಮಾತ್ರವಲ್ಲದೆ ಎಲ್ಲೆಡೆ ದಿನನಿತ್ಯದ ಲೈಫ್ಸ್ಟೈಲ್ ನಲ್ಲೂ ಬದಲಾವಣೆಯಾಗುತ್ತಿದೆ. ಹಾಗೆಂದು ಮಳೆ ಬಂದ ಕೂಡಲೇ ಮೊದಲಿನಂತೆ ಮುದುಡಿಕೊಂಡು ಮನೆಯೊಳಗೆ ಯಾರೂ ಇರುವುದಿಲ್ಲ. ಬದಲಾಗಿ ಸೀಸನ್ಗೆ ಒದಗುವುದಷ್ಟೇ ನಮ್ಮ ಕೆಲಸವೆಂದು ಮಳೆಗಾಲವನ್ನೂ ಕಲರ್ಫುಲ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.
ಏಕೆಂದರೆ ತುಂತುರು ಮಳೆಯಿಂದ ಆರಂಭವಾಗುವ ಮಳೆ ಕೆಲವೊಮ್ಮೆ ಹೊರಗಡೆ ಹೆಜ್ಜೆ ಇಡಲು ಸಾಧ್ಯವಾಗದಂತೆ ಗಂಟೆಗಟ್ಟಲೆ ಸುರಿಯುತ್ತದೆ. ಕೆಲವರಿಗೆ ಮಳೆಯೊಂದಿಗೆ ತುಂಟಾಟ ಆಡಲು ಕಷ್ಟವಾದರೂ ಬಟ್ಟೆ ಒದ್ದೆಯಾದರೆ ಕಷ್ಟವೆಂದು ಸುಮ್ಮನಾಗುತ್ತಾರೆ. ಹಾಗಾಗಿ ಮನೆಯಿಂದ ಹೊರಗೆ ಹೋಗುವಾಗ ಮಳೆಯಿಂದ ಸಂರಕ್ಷಿಸಿಕೊಳ್ಳಲು ಕೆಲವು ವಿಷಯಗಳನ್ನು ಮರೆಯದೇ ಪಾಲಿಸುವುದು ಉತ್ತಮ
1)ಮಳೆಯಲಿ ಕೊಡೆಯಿರಲಿ ಜೊತೆಯಲಿ
ಮಳೆಗಾಲದಲ್ಲಿ ತುರ್ತು ಕೆಲಸಗಳಿಗೆ ಹೊರಗೆ ಹೋಗಬೇಕಾದ ಅಗತ್ಯತೆ ಇರುತ್ತದೆ. ಮಳೆ ನಿಂತಮೇಲೆ ಹೋಗುತ್ತೇನೆ ಎನ್ನುವುದು ಹೈಲಿ ಇಂಪಾಸಿಬಲ್, ಕಾಯುವ ಪೇಶೆನ್ಸ್ ಸಹ ಇರುವುದಿಲ್ಲ. ಆದ್ದರಿಂದ ಹೊರಗೆ ಹೋದಂತಹ ಸಂದರ್ಭದಲ್ಲಿ ಕೊಡೆ ನಿಮ್ಮ ಜೊತೆಗೆ ಇರಬೇಕು. ಇದಕ್ಕಾಗಿ ಮೊದಲಿನಂತೆ ಮಾರುದ್ದದ ಛತ್ರಿಗಳನ್ನು ಕೊಂಡೊಯ್ಯಬೇಕಿಲ್ಲ. ಹ್ಯಾಂಡ್ಬ್ಯಾಗ್ ಅಥವಾ ಕಾಲೇಜ್ ಬ್ಯಾಗ್ಗಳಲ್ಲೇ ಕ್ಯಾರಿ ಮಾಡಬಹುದಾದ ಛತ್ರಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.
2) ರೇನ್ಕೋಟ್ ಮಸ್ಟ್ ಅಂಡ್ ಬೆಸ್ಟ್
ಮಳೆಗಾಲದಲ್ಲಿ ಕೊಡೆಗಳಿಗಿಂತಲೂ ವಾಟರ್ ಪ್ರೂಫ್ ರೇನ್ಕೋಟ್ ಹೆಚ್ಚು ಸೂಕ್ತ. ಅದಕ್ಕೆಂದೇ ನಗರದ ಪ್ರಮುಖ ರಸ್ತೆಗಳಲ್ಲಿ, ವಿವಿಧ ಮೊಹಲ್ಲಾಗಳಲ್ಲಿ ತಲೆ ಎತ್ತಿರು ಶೆಡ್ಗಳಲ್ಲಿ ಅಗ್ಗದ ಬೆಲೆಗಳಿಗೆ ಕೋಟ್ಗಳು ಸಿಗುತ್ತವೆ. ಫುಲ್ ಲೆಂಥ್ ಹಾಗೂ ಹಾಫ್ ಲೆಂಥ್ ನಂತಹ ಕೋಟ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಫುಲ್ ಲೆಂಥ್ ಕೋಟ್ಗಳನ್ನು ಧರಿಸುವುದರಿಂದ ಬಟ್ಟೆ ಒದ್ದೆಯಾಗುವುದನ್ನು ತಪ್ಪಿಸಬಹುದು
3) ಲೈಟ್ವೇಯ್ಟ್ ಸ್ಲಿಪ್ಪರ್ (ಪಾದರಕ್ಷೆ) ಧರಿಸಿ
ನಾವು ಧರಿಸುವ ಪಾದರಕ್ಷೆ ಕೂಡ ಸೀಸನ್ಗೆ ಹೊಂದುವಂತಿರಬೇಕು. ಹೊರಗೆ ಹೋಗಿ ಬಂದಾಕ್ಷಣ ಪಾದರಕ್ಷೆಗಳನ್ನು ಒಣಗಿಸಬೇಕು. ಸಾಧ್ಯವಾದಷ್ಟು ಶೂಗಳಿಗಿಂತ ಓಪನ್ ಚಪ್ಪಲಿಗಳನ್ನು ಬಳಸುವುದು ಬೆಸ್ಟ್
4) ಬೆಚ್ಚಗಿನ, ಹಗುರವಾದ ಉಡುಪು
ಮಳೆಗಾಲದಲ್ಲಿ ಯಾವ ವೇಳೆ ಮಳೆ ಬರುತ್ತದೆ. ಎಲ್ಲಿ ನಾವು ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತೇವೆ ಎಂಬುದು ಹೇಳಲಾಗುವುದಿಲ್ಲ. ಹಾಗಾಗಿ ಮಹಿಳೆಯರು ಹೊರಗೆ ಹೋಗುವಾಗ ಹೆಚ್ಚಿನ ಭಾರವಿರುವ ಸೀರೆ, ಲೆಹೆಂಗಾ, ಪುರುಷರು ಜೀನ್ಸ್, ಕೋಟ್ ಹಾಗೂ ಭಾರವಾದ ಶೂಗಳನ್ನು ಬಳಸುವುದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಬೇಕು. ಪುರುಷರು ಜುಬ್ಬ-ಪೈಜಾಮ್, ಕಾಟನ್ ಬಟ್ಟೆ ಹಾಗೂ ಸಂಜೆ ವೇಳೆಯಲ್ಲಿ, ಮನೆಯಲ್ಲಿರುವ ಸಂದರ್ಭದಲ್ಲಿ ಬೆಚ್ಚಗಿನ ಉಲ್ಲನದ ಬಟ್ಟೆಗಳನ್ನು ಧರಿಸುವುದು ಸೂಕ್ತ. ಮಳೆಯಲ್ಲಿ ನೆನೆದರೂ ಬೇಗನೆ ಒಣಗುವ ಬಟ್ಟೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
5) ಸ್ಟೈಲಿಶ್ ಪಕ್ಕಕ್ಕಿಡಿ ವಾಟರ್ ಪ್ರೂಫ್ಗೆ ಆದ್ಯತೆ ಕೊಡಿ
ಎಲ್ಲದರಲ್ಲೂ ಸ್ಟೈಲಿಶ್ ಆಸದಯತೆ ಕೊಡುವ ಯುವಸಮೂಹ ಮಳೆಗಾಲದಲ್ಲಿ ಸಾಧ್ಯವಾದಷ್ಟು ಸ್ಟೈಲಿಶ್ ಅನ್ನು ಪಕ್ಕಕ್ಕೆ ಇಟ್ಟು ವಾಟರ್ ಪ್ರೂಫ್ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೌದು ಮಳೆಗಾಲದಲ್ಲಿ ಬಹುತೇಕರು ಸ್ಟೈಲಿಶ್ ಬ್ಯಾಗ್ಗಳನ್ನು ಬಳಸುತ್ತಾರೆ. ಇದರಿಂದ ಅವರು ಬಣ್ಣ ಮಾಸಬಹುದು, ಇಲ್ಲವೇ ನೀರು ಹೀರಿಕೊಂಡು ಬ್ಯಾಗ್ನಲ್ಲಿರುವ ವಸ್ತುಗಳು ಹಾಳಾಗಬಹುದು. ಹಾಗಾಗಿ ವಾಟರ್ಪ್ರೂಫ್ ಬ್ಯಾಗ್ ಬಳಸುವುದು ಒಳ್ಳೆಯದು ಜೊತೆಗೆ, ಮಹಿಳೆ ಹಾಗೂ ಪುರುಷರು ಸ್ಕಾರ್ಫ್ ಅಥವಾ ವಾಟರ್ ಪ್ರೂಫ್ ಬ್ಯಾಗ್ ಕೊಂಡೊಯ್ಯುವುದು ಬೆಸ್ಟ್. ಮಳೆ ಗಾಳಿ ಹೆಚ್ಚಾದಾಗ ಧರಿಸಬಹುದು.