ಸೂಪರ್ಸ್ಪೋರ್ಟ್ ಸ್ಟೇಡಿಯಂನಲ್ಲಿ ಆರಂಭವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲನೇ ದಿನ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 38 ರನ್ಗಳಿಸಿ ವೇಗಿ ಕಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ಹಾಗೂ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದ್ದ ಮಹತ್ತರ ದಾಖಲೆಗಳನ್ನು ಮುರಿದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ 35 ಇನಿಂಗ್ಸ್ಗಳಿಂದ ವಿರಾಟ್ ಕೊಹ್ಲಿ 4 ಶತಕಗಳ ನೆರವಿನಿಂದ 2,101 ರನ್ ಗಳಿಸಿ ರೋಹಿತ್ ಶರ್ಮಾ (2097 ರನ್, 26 ಇನಿಂಗ್ಸ್, 7 ಶತಕ) ಅವರನ್ನು ಹಿಂದಿಕ್ಕಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್ಮನ್ಗಳು
* 2,101 ರನ್ -ವಿರಾಟ್ ಕೊಹ್ಲಿ
* 2,097 ರನ್- ರೋಹಿತ್ ಶರ್ಮಾ
* 1,769 ರನ್- ಚೇತೇಶ್ವರ್ ಪುಜಾರ
* 1,589 ರನ್- ಅಜಿಂಕ್ಯ ರಹಾನೆ
ಹರಿಣಿಗಳ ನಾಡಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಉತ್ತಮ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ, 24 ಇನಿಂಗ್ಸ್ಗಳಿಂದ 1,236 ರನ್ ಗಳಿಸಿದ್ದರು. ಸೆಂಚೂರಿಯನ್ನ ಸೂಪರ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ಗೂ ಮುನ್ನ ರಾಹುಲ್ ದ್ರಾವಿಡ್ (1252 ರನ್) ದಾಖಲೆಯನ್ನು ಹಿಂದಿಕ್ಕಲು ಕೊಹ್ಲಿಗೆ 16 ರನ್ಗಳ ಅಗತ್ಯವಿತ್ತು. ವಿರಾಟ್ ಕೊಹ್ಲಿ (38 ರನ್,5X4) ವೇಗಿ ಕಗಿಸೊ ರಬಾಡ ಬೌಲಿಂಗ್ನಲ್ಲಿ ಔಟ್ ಸೈಡ್ ದಿ ಆಫ್ ಸ್ಟಂಪ್ ಎಸೆತವನ್ನು ಆಡಲು ವಿಕೆಟ್ ಕೀಪರ್ಗೆ ಕ್ಯಾಚಿತ್ತು ನಿರ್ಗಮಿಸಿದರು.