ಚಿಕ್ಕಬಳ್ಳಾಪುರ:- ಬಸ್ ಇಳಿದು ನಾಪತ್ತೆ ಆಗಿದ್ದ 3 ವರ್ಷದ ಮಗು ಮರಳಿ ಪೋಷಕರ ಮಡಿಲಿಗೆ ಸೇರಿರುವ ಘಟನೆ ತರೀಕೆರೆಯಲ್ಲಿ ನಡೆದಿದೆ.
ಅಜ್ಜ ತನ್ನ ಮೂರೂ ವರ್ಷದ ಮೊಮ್ಮಗುವನ್ನು ಕರೆದುಕೊಂಡು ಬಸ್ಸಿನಲ್ಲಿ ತರೀಕೆರೆಗೆ ಹೊರಟಿದ್ದರು. ಈ ನಡುವೆ ಅಜ್ಜ ನಿದ್ರೆಗೆ ಜಾರಿದ್ದಾರೆ ಇದಾದ ಕೆಲ ಹೊತ್ತಿನಲ್ಲಿ ಬಸ್ಸು ನಿಲ್ದಾಣದಲ್ಲಿ ನಿಂತಿದೆ ಈ ವೇಳೆ ಮಗು ಇಳಿದುಬಿಟ್ಟಿದೆ. ಇದಾದ ಕೆಲ ಹೊತ್ತಿನಲ್ಲಿ ತರೀಕೆರೆಗೆ ಹೋಗುವ ಮತ್ತೊಂದು ಬಸ್ಸು ಇದೆ ನಿಲ್ದಾಣದಲ್ಲಿ ನಿಂತಿದ್ದು ಅದಕ್ಕೆ ಹತ್ತಿದ ಮಗು ಅಜ್ಜ ಇಲ್ಲದನ್ನು ಕಂಡು ಅಳತೊಡಗಿದೆ ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ಬಳಿಕ ಮಗುವನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅಲ್ಲಿ ಮಗುವಿನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಇದರಿಂದ ಮಗುವಿನ ಪೋಷಕರಿಗೆ ಮಾಹಿತಿ ಸಿಕ್ಕಿ ಬಳಿಕ ಪೋಷಕರು ಠಾಣೆಗೆ ಬಂದು ಮಗುವನ್ನು ಕರೆದುಕೊಂಡು ಹೋಗಿದ್ದಾರೆ.
ಮಗುವನ್ನು ಪೋಷಕರಿಗೆ ತಲುಪಿಸುವಲ್ಲಿ ಸಹಕರಿಸಿದ ಸ್ಥಳೀಯರು ಹಾಗೂ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.