ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕಲಘಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ನಾತಕೋತ್ತರ ಕೇಂದ್ರ ಧಾರವಾಡ ಇಲ್ಲಿ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮ (ಎಫ್.ಡಿ.ಪಿ ) ವನ್ನು ಆಂತರಿಕ ಗುಣಮಟ್ಟ ಭರವಸ ಕೋಶದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ರಾಯಚೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್. ಹರೀಶ್ ರಾಮಸ್ವಾಮಿ ಅವರು “ಬದಲಾಗುತ್ತಿರುವ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾಧ್ಯಾಪಕರು ತಮ್ಮನ್ನು ತಾವು ಹೇಗೆ ಸಿದ್ಧಪಡಿಸಿಕೊಳ್ಳಬೇಕು” ಎಂಬ ವಿಷಯದ ಕುರಿತು ಕಾರ್ಯಗಾರ ನಡೆಸಿದರು.
ಈ ಕಾರ್ಯಗಾರದಲ್ಲಿ ಇಂದಿನ ತಲೆಮಾರಿನ ವಿದ್ಯಾರ್ಥಿಗಳ ಕಲಿಕಾ ವಿಧಾನ, ಅವರ ಬೇಡಿಕೆಗಳು ಬದಲಾಗುತ್ತಿವೆ. ಅದಕ್ಕೆ ಪೂರಕವಾಗುವ ರೀತಿಯಲ್ಲಿ ಹಾಗೂ ವಿದ್ಯಾರ್ಥಿಗಳನ್ನು ಒಬ್ಬ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವುದರೊಂದಿಗೆ ಉದ್ಯೋಗ ಮಾರುಕಟ್ಟೆಗೆ ಸಿದ್ಧಪಡಿಸುವ ರೀತಿಯಲ್ಲಿ ಪ್ರಾಧ್ಯಾಪಕರು ತಮ್ಮ ಬೋಧನೆಯನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಪಠ್ಯಕ್ರಮ ಸಿದ್ಧಪಡಿಸುವುದು ಹೇಗೆ ಹಾಗೂ ಮೌಲ್ಯಮಾಪನ ಯಾವ ರೀತಿ ಇರಬೇಕು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಿಕೆ ಹೇಗಿರಬೇಕು ಎಂಬ ವಿಷಯದ ಕುರಿತು ಪ್ರಾಯೋಗಿಕ ತರಬೇತಿಯನ್ನು ನೀಡಿದರು. ಕೌಶಲ್ಯ ಆಧಾರಿತ ವಿಷಯವಾರು ಪಠ್ಯಕ್ರಮ ಹೇಗೆ ಸಿದ್ಧಪಡಿಸಬೇಕು ಎಂದು ತರಬೇತಿ ನೀಡುವುದರೊಂದಿಗೆ ಈಗಾಗಲೇ ಬೋಧಿಸುತ್ತಿರುವ ರಾಜ್ಯಶಾಸ್ತ್ರ ಕೌಶಲ್ಯ ಅಭಿವೃದ್ಧಿ ಪಠ್ಯಕ್ರಮದ ಕುರಿತು ಪ್ರಾಯೋಗಿಕ ವಿವರಣೆ ನೀಡಿದರು. ವಿದ್ಯಾರ್ಥಿಗಳಿಂದ ಈ ಪಠ್ಯಕ್ರಮದ ಕುರಿತು ಅವರ ಭಾಗವಹಿಸುವಿಕೆ, ಅನುಭವ ಹಾಗೂ ಅದರಿಂದಾದ ಉಪಯೋಗಗಳ ಬಗ್ಗೆ ಪ್ರಾಧ್ಯಾಪಕರಿಗೆ ಮಾಹಿತಿ ನೀಡಿದರು.
ಈ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಪಠ್ಯಕ್ರಮದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ನಳಿನಿ ಬೆಂಗೇರಿ ಈ ರೀತಿ ವಿಶ್ವವಿದ್ಯಾಲಯದ ಕುಲಪತಿಗಳು ಪ್ರಾಧ್ಯಾಪಕರಿಗೆ ತಮ್ಮ ಅನುಭವವನ್ನು ಕಾರ್ಯಾಗಾರದ ಮೂಲಕ ತಿಳಿಸಿಕೊಟ್ಟರೆ ಉನ್ನತ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ತರಬಹುದು ಎಲ್ಲಾ ಕುಲಪತಿಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲ್ ಆಗ್ರ ಬದಲಾವಣೆ ತರಬಹುದು ಎಂದು ಅಭಿಪ್ರಾಯಪಟ್ಟರು.
ಆಂತರಿಕ ಗುಣಮಟ್ಟ ಭರವಸಾಕೋಷದ ಸಂಚಾಲಕರಾದ ಡಾ. ಜಿ ಕೆ. ಬಡಿಗೇರ್ ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಕೋಶದ ಸಹ ಸಂಚಾಲಕರು ಹಾಗೂ ಕಾರ್ಯಕ್ರಮದ ಸಂಯೋಜಕರು ಆದ ಡಾ. ಬಸವರಾಜೇಶ್ವರಿ ಪಾಟೀಲ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಏನ್. ಎಂ. ಎಂಭತ್ನಾಳ್ ಮುಖ್ಯಸ್ಥರು ಕನ್ನಡ ವಿಭಾಗ ಇವರು ವಂದಿಸಿದರು. ಡಾ. ಸಿ ವಿ. ಮರಿದೇವರ ಮಠ ನಿರೂಪಿಸಿದರು. ತರಬೇತಿ ಕಾರ್ಯಗಾರದಲ್ಲಿ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ತರಬೇತಿಯ ಪ್ರಯೋಜನ ಪಡೆದರು.