ಮನೆಯಲ್ಲಿ ಹಲವಾರು ಸಮಸ್ಯೆ ಗಳು ಕಾಡುತ್ತದೆ. ಹಣ, ಆರೋಗ್ಯ, ಜಗಳ, ಉದ್ಯೋಗ ಮುಂತಾದವುಗಳಲ್ಲಿ ಸಮಸ್ಯೆ ಕಂಡುಬರುತ್ತದೆ. ಹಾಗಾಗಿ ಅದನ್ನು ನಿವಾರಿಸಲು ಉಪ್ಪಿನಿಂದ ಈ ಪರಿಹಾರ ಮಾಡಿ.
ನೆಲ ಒರೆಸುವ ನೀರಿಗೆ ಕಲ್ಲುಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನೆಲವನ್ನು ಸ್ವಚ್ಛಗೊಳಿಸಿ. ಇದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ನೆಲೆಸುತ್ತದೆ.
ಮನೆಯ ಮೂಲೆ ಮೂಲೆಯಲ್ಲಿ ಗಾಜಿನ ಬೌಲ್ ನಲ್ಲಿ ಕಲ್ಲುಪ್ಪನ್ನು ಹಾಕಿಡಿ. ಈ ಉಪ್ಪು ಸ್ವಲ್ಪ ದಿನದಲ್ಲಿ ಕಪ್ಪಾಗುತ್ತದೆ. ಯಾಕೆಂದರೆ ಇದು ಮನೆಯಲ್ಲಿರುವ ನಕರಾತ್ಮಕ ಶಕ್ತಿಯನ್ನು ಎಳೆದುಕೊಳ್ಳುತ್ತದೆ. ಇದನ್ನು ಬಾತ್ ರೂಂನಲ್ಲಿ ಹಾಕಿ.
ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯ ಬಾತ್ ರೂಂನಲ್ಲಿ ಗಾಜಿನ ಬಟ್ಟಲಿನಲ್ಲಿ ಕಲ್ಲುಪ್ಪನ್ನು ಹಾಕಿಡಿ.
ಹಾಗೇ ನಿಮ್ಮ ಸಾಲದ ಬಾಧೆಯನ್ನು ನಿವಾರಿಸಿ ಮನೆಯಲ್ಲಿ ಹಣದ ಬಲವನ್ನು ಹೆಚ್ಚಿಸಲು ಅಡುಗೆ ಮನೆಯಲ್ಲಿರುವ ಉಪ್ಪಿನ ಡಬ್ಬದಲ್ಲಿ ಲವಂಗವನ್ನು ಹಾಕಿಡಿ.
ಇದರಿಂದ ಮನೆಯಲ್ಲಿನ ಸಮಸ್ಯೆ ನಿವಾರಿಸಬಹುದು.